ಎಲ್ಲ ಗೇಲಿ ಮಾಡ್ತಾರೆ...
22 ವರ್ಷ. 5 ಅಡಿ 11 ಇಂಚು ಎತ್ತರ ಇದ್ದೀನಿ. ತೂಕ ಮಾತ್ರ 58 ಕೆ.ಜಿ. ಸಣಕಲು ಶರೀರ. ನನ್ನ ಎರಡೂ ಕಣ್ಣುಗಳು ಮತ್ತು ಕೆನ್ನೆ ಒಳ ಹೋಗಿದ್ದು, ಗೆಳೆಯರೆಲ್ಲ ಗೇಲಿ ಮಾಡುತ್ತಾರೆ. ಒಮ್ಮೊಮ್ಮೆ ತುಂಬಾ ಬಾಜಾರಾಗುತ್ತೆ.
- ಶ್ರೀನಿವಾಸ್
ನಮ್ಮ ಅಂದ, ದೇಹ ಸೌಂದರ್ಯಕ್ಕೆ ನಾವಾಗಲೀ, ಹೆತ್ತವರಾಗಲೀ ಕಾರಣವಾ? ಅಲ್ಲ ತಾನೆ? ಹೀಗಿರುವಾಗ ನಿಮ್ಮ ರೂಪದ ಬಗ್ಗೆ ಕೀಳರಿಮೆ ಏಕೆ? ಯಾರು ಏನೋ ಹೇಳುತ್ತಾರೆಂದು ತಲೆ ಕೆಡಿಸಿಕೊಳ್ಳುವುದೇಕೆ? ಬೇರೆಯವರಿಗಾಗಿ ನಾನು ಬದುಕಬೇಕಿಲ್ಲ ಎಂದು ಈ ಕ್ಷಣವೇ ನಿರ್ಧರಿಸಿ. ಆಗ ನೋಡಿ, ನಿಮ್ಮಲ್ಲಿ ಮಾನಸಿಕವಾಗಿ ಎಂಥ ಪರಿವರ್ತನೆ ಆಗುತ್ತದೆ ಎಂದು? ಮುಂದೆ ಯಾರಾದರೂ ನಿಮ್ಮನ್ನು ಅಣಕಿಸಿದರೆ ಹೇಳಿ.
-ಡಾ. ಸ್ಯಾಟಲೈಟ್
anekaby2@gmail.com