ನೀವೂ ಪಾಲ್ಗೊಳ್ಳಿ
ಆತ್ಮೀಯ ಓದುಗ ಬಂಧುಗಳೆ,
'ಅನೇಕ' ಪುಟವನ್ನು ನಿಮ್ಮ ಸಹಯೋಗದಲ್ಲಿ ಇನ್ನಷ್ಟು ವೈವಿಧ್ಯಮಯ ಪುಟವನ್ನಾಗಿ ರೂಪಿಸುವುದು ಮತ್ತು ಓದುಗ ಬರಹಗಾರರ ಮುಕ್ತ ಸಂವಹನಕ್ಕೆ ಅವಕಾಶ ಕಲ್ಪಿಸುವುದು ನಮ್ಮ ಆಶಯ. ಅದಕ್ಕಾಗಿ ನಿಮಗಾಗಿ ಹೊಸ ಅಂಕಣ ಜಗುಲಿ.
ಪ್ರತಿ ವಾರ ಒಂದು ವಿಷಯದ ಬಗ್ಗೆ ಚರ್ಚೆಗೆ ವೇದಿಕೆ ಕಲ್ಪಿಸುವುದು 'ಜಗುಲಿ'. ಈ ವಾರದ ವಿಷಯ 'ರಿಯಾಲಿಟಿ ಇಲ್ಲದ ರಿಯಾಲಿಟಿ ಶೋಗಳು'.
ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕವೂ ಕಳಿಸಬಹುದು. ಆಯ್ದ ಬರಹಗಳನ್ನು ಪ್ರಕಟಿಸಲಾಗುವುದು.
ನಮ್ಮ ವಿಳಾಸ:
ಬೈಟು ಕಾಫಿ (ಅನೇಕ ವಿಭಾಗ)
ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ,
ಕ್ವೀನ್ಸ್ ರಸ್ತೆ, ಬೆಂಗಳೂರು- 560001
ಇ-ಮೇಲ್: anekaby2@gmail.com
ಅನುವಾದಿತ-ಪುಸ್ತಕ ಕ್ಲಬ್
ಓದುಗರಿಗೆ ಉತ್ತಮ ಅನುವಾದಿತ ಕೃತಿಗಳನ್ನು ನೇರವಾಗಿ ಮತ್ತು ಕಡಿಮೆ ಬೆಲೆಯಲ್ಲಿ ತಲುಪಿಸುವ ಉದ್ದೇಶದಿಂದ ಡಿ.ಎನ್. ಶ್ರೀನಾಥ್ ಅವರು 'ಅನುವಾದಿತ-ಪುಸ್ತಕ ಕ್ಲಬ್' ಪ್ರಾರಂಭಿಸಲು ಯೋಜನೆ ರೂಪಿಸಿದ್ದಾರೆ. ಪುಸ್ತಕಗಳು ಪ್ರಕಟವಾಗುವುದಕ್ಕೂ ಮೊದಲು ಸದಸ್ಯರನ್ನು ಸಂಪರ್ಕಿಸಿ ವಿವರಗಳನ್ನು ತಿಳಿಸಲಾಗುವುದು. ಅಪೇಕ್ಷೆಯುಳ್ಳ ಓದುಗರು, ಸಾಹಿತ್ಯಾಸಕ್ತರು ಒಂದು ಕಾರ್ಡ್ ಮೂಲಕ ತಮ್ಮ ಸಂಪೂರ್ಣ ವಿಳಾಸವನ್ನು ಪಿನ್‌ಕೋಡ್ ಹಾಗೂ ಮೊಬೈಲ್ ನಂಬರ್ ಸಹಿತ ಬರೆದು ತಿಳಿಸಬೇಕು. ಹೀಗೆ ಕಾರ್ಡ್ ಬರೆದವರನ್ನೇ ಸದಸ್ಯರನ್ನಾಗಿ ಪರಿಗಣಿಸಲಾಗುವುದು. ಸದಸ್ಯತ್ವ ಶುಲ್ಕ ಇರುವುದಿಲ್ಲ. ಆಸಕ್ತಿಯುಳ್ಳವರು- ಡಿ.ಎನ್. ಶ್ರೀನಾಥ್, ನವನೀತ, 2ನೇ ತಿರುವು, ಅಣ್ಣಾಜಿ ರಾವ್ ಲೇಔಟ್, ಮೊದಲ ಹಂತ, ವಿನೋಬಾನಗರ, ಶಿವಮೊಗ್ಗ-577204 (ಮೊ: 96118 73310) ಸಂಪರ್ಕಿಸಬಹುದು.