ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮತ್ತೊಬ್ಬಳನ್ನು ಲವ್ ಮಾಡಲಾ?

Vishwanath S
Updated On : 14 Jul 2013, 2:05 am

ಎರಡು ವರ್ಷಗಳಿಂದ ನನ್ನನ್ನು ಪ್ರೀತಿಸಿದವಳು ಈಗ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ನಾನು ಮಾತನಾಡಿಸಲು ಹೋದರೆ 'ನೀನು ಯಾರು ಗೊತ್ತಿಲ್ಲ' ಅಂತಾಳೆ. ಅವಳಿಗೆ ಪಾಠ ಕಲಿಸಲು ಇನ್ನೊಬ್ಬಳನ್ನು ಲವ್ ಮಾಡಬೇಕು ಎನ್ನುವುದು ನನ್ನ ನಿಲುವು. ಆದರೆ ಯಾರೂ ನನ್ನನ್ನೂ ಪ್ರೀತಿಸುತ್ತಿಲ್ಲ. ಏನು ಮಾಡಲಿ?
- ನವನೀತ್, ಊರು ಬೇಡ
ಹುಚ್ಚು ಎನ್ನುವುದು ಇದನ್ನೇ. ಕೈ ಕೊಟ್ಟವಳಿಗೆ ಬುದ್ಧಿ ಕಲಿಸಲು ಮತ್ತೊಬ್ಬಳನ್ನು ಪ್ರೀತಿಸುವುದು. ಇಂಥದ್ದೆಂತೋ ಹುಚ್ಚಾಟ ಮಾಡಿಯೇ ಮೊದಲ ಹುಡುಗಿಯೂ ನಿನ್ನನ್ನು ನಿರಾಕರಿಸಿರಬೇಕು. ಅವಳು ನಿನ್ನ ಎರಡು ವರ್ಷದ ಪ್ರೀತಿ ನಿರಾಕರಿಸಲು ಕಾರಣವೇನು ಎಂದು ಆಲೋಚಿಸು. ತಿದ್ದಿಕೊಳ್ಳುವ ದಾರಿ ಕಾಣಿಸುತ್ತದೆ. ನಿನಗಿನ್ನೂ 21 ವರ್ಷ. ಆದದ್ದು ಆಗಿಹೋಯಿತು ಪ್ರೀತಿ-ಪ್ರೇಮ ಬಿಟ್ಟು ಭವಿಷ್ಯದ ಬಗ್ಗೆ ಗಮನ ಹರಿಸು.

-ಡಾ. ಸ್ಯಾಟಲೈಟ್
anekaby2@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement