ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಳ್ಳಿಗಳಲ್ಲಿ ಸಂಚಾರ ಪೊಲೀಸರಿಲ್ಲ

Vishwanath S
Updated On : 14 Jul 2013, 2:03 am

ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಸಂಚಾರ ಪೊಲೀಸರು ಇರುವುದಿಲ್ಲ.
ಆದರೆ, ಕಮೀಷನರೇಟ್ ವ್ಯಾಪ್ತಿ ಹಾಗೂ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸರು ಇರುತ್ತಾರೆ. ಹಾಗಾಗಿ ಅಪರಾಧ ಹಾಗೂ  ಅಪಘಾತ ಕೃತ್ಯಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರೇ ಪರಿಶೀಲಿಸುತ್ತಾರೆ.  
ಆದರೆ, ಅಪಘಾತ, ಆಸ್ತಿ ವಿವಾದ, ಹೊಡೆದಾಟ ಸೇರಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರುವ ಎಲ್ಲಾ ಪ್ರಕರಣಗಳನ್ನು ಗ್ರಾಮಾಂತರ ಪೊಲೀಸರೇ ಅಂದರೆ ಒಂದೇ ಠಾಣೆ ಪೊಲೀಸರು ನಿರ್ವಹಿಸುತ್ತಾರೆ (ತಮ್ಮ ವ್ಯಾಪ್ತಿಗೆ ಬರುವ ಪ್ರಕರಣ).
ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ ಹತ್ತಾರು ಪ್ರಕರಣ ದಾಖಲಾಗುತ್ತವೆ. ಆದರೆ, ಗ್ರಾಮಾಂತರ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ದಿನಕ್ಕೆ ಒಂದು ದೂರು ದಾಖಲಾದರೆ, ಮತ್ತೊಂದು ದೂರು ದಾಖಲಾಗಲು, ವಾರ, 15 ದಿನಗಳೇ ಆಗಬಹುದು.
ಹಾಗಾಗಿ ಅಲ್ಲಿನ ಪೊಲೀಸರಿಗೆ ಅಪರಾಧ ನಿಯಂತ್ರಣ, ಆರೋಪಿ ಸೆರೆ ಮಾಡುವ ಕೆಲಸ ಕಡಿಮೆ ಇರುತ್ತದೆ. ಆದ್ದರಿಂದ ಎಲ್ಲಾ ಪ್ರಕರಣ ಅವರೇ ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ. ಯಾವುದೇ ದೂರು ದಾಖಲಿಸಿದರೂ ಅದೇ ಠಾಣೆಗೆ ದಾಖಲಿಸಬೇಕು. ಎಲ್ಲಾ ಪ್ರಕರಣಗಳತ್ತ ಅವರೇ ಗಮನಹರಿಸುತ್ತಾರೆ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement