ಒಮರಿ ಬ್ಯಾಂಕ್ಸ್ ಜನುಮ ದಿನ
1982.
ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ.
ಸಂಗೀತಗಾರ ಕೂಡ. ಸಂಗೀತದತ್ತಲೇ ಒಲವು ಜಾಸ್ತಿಯಾಗಿ ಕ್ರಿಕೆಟ್ಗೆ ವಿದಾಯ.
ಮೊದಲ ಏಕವ್ಯಕ್ತಿ ಆಲ್ಬಂ 'ಮೂವ್ ಆನ್' ಭಾರಿ ಜನಪ್ರಿಯ.
ಮೃಣಾಲ್ ಗೋರೆ ಪುಣ್ಯತಿಥಿ
1928-2012.
ಸಮಾಜವಾದ ಸಿದ್ಧಾಂತದ ನಾಯಕಿ, ಮಾಜಿ ಸಂಸದೆ.
ಮುಂಬೈನ ಗೋರೆಗಾಂವ್ಗೆ ನೀರು ದೊರಕಿಸಲು ಭಾರಿ ಪ್ರಯತ್ನ. ಹೀಗಾಗಿ 'ಪಾನಿವಾಲಿ ಬಾಯಿ' ಎಂಬ ಖ್ಯಾತಿ.
ಸಂಪುಟ ಸೇರುವಂತೆ ಪ್ರಧಾನಿ ಮೊರಾರ್ಜಿ ದೇಸಾಯಿ ನೀಡಿದ್ದ ಆಹ್ವಾನ ತಳ್ಳಿಹಾಕಿದ್ದರು.
ದಿನಚರಿತೆ
1948- ಸಂವಿಧಾನ ಅಳವಡಿಸಿಕೊಂಡ ದಕ್ಷಿಣ ಕೊರಿಯಾ.
1955- ಕ್ಯಾಲಿಫೋರ್ನಿಯಾದಲ್ಲಿ ಡಿಸ್ನಿಲ್ಯಾಂಡ್ ಸಾರ್ವಜನಿಕ ಬಳಕೆಗೆ ಮುಕ್ತ.
1976- ಸಮ್ಮರ್ ಒಲಿಂಪಿಕ್ನಲ್ಲಿ 25 ಆಫ್ರಿಕನ್ ತಂಡಗಳು ನ್ಯೂಜಿಲೆಂಡ್ ತಂಡವನ್ನು ಬಹಿಷ್ಕರಿಸಿದವು.
ಟ್ವೀಟ್ಸ್ಟಾಲ್
ನಾನು ತಂದೆಯನ್ನು ಕಳೆದುಕೊಂಡಾಗ ಸ್ನೇಹಿತನೊಬ್ಬ ಸಂತೈಸಿದ್ದು- 'ನೀನೇ ಅದೃಷ್ಟವಂತ. 60 ವರ್ಷ ಅವರೊಂದಿಗೆ ಬಾಳಿದ್ದೀಯ. ನನಗೆ ಕೆಲವರ್ಷಗಳನ್ನೂ ತಂದೆಯೊಟ್ಟಿಗೆ ಕಳೆಯುವ ಭಾಗ್ಯ ಸಿಗಲಿಲ್ಲ'
-ಅಮಿತಾಭ್ ಬಚ್ಚನ್