ತಾಯಿ ಬರುವಳಾ?
ಒಳ್ಳೆಯ ಉದ್ಯೋಗವಿದೆ. ಇಬ್ಬರು ಚೂಟಿಯಾದ ಹೆಣ್ಣು ಮಕ್ಕಳಿದ್ದಾರೆ. ಮನೆಯೊಡತಿ ಅನಾರೋಗ್ಯದಿಂದ ನಮ್ಮನ್ನು ಬಿಟ್ಟುಹೋಗಿಬಿಟ್ಟಳು. ಸರಿಯಾದ ಆರೈಕೆ ಇಲ್ಲದೆ ಮಕ್ಕಳು ಪರದೇಶಿಗಳಾಗಿವೆ. ಅವರಿಬ್ಬರಿಗಾಗಿ ತಾಯಿಯಾಗಿ ಬರುವವಳಿಗಾಗಿ ಕಾಯುತ್ತಿದ್ದೇನೆ. ಯಾರೂ ಬರುತ್ತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಕೊಡಿ.
- ಬಿ.ಸಿ. ಜಗದೀಶ್, ಊರು ಬೇಡ
ನಿಮ್ಮ ನಿರ್ಧಾರ ಸರಿಯಾಗಿದೆ. ಆದರೆ ಸಿಕ್ಕಾಪಟ್ಟೆ ಆಯ್ಕೆ, ನಿರೀಕ್ಷೆಗಳನ್ನು ಇಟ್ಟುಕೊಂಡಿರುವಂತಿದೆ. ನಿಮ್ಮ ಆದ್ಯತೆ ಏನು? ಮಕ್ಕಳನ್ನು ನೋಡಿಕೊಳ್ಳಲು ತಾಯಿ ಬೇಕು, ನಿಮಗೊಬ್ಬಳು ಸಂಗಾತಿ ಬೇಕು. ಎಳೆ ವಯಸ್ಸಿನ ವಿಧವೆಯರಿರುತ್ತಾರೆ. ಅಂಥವರಲ್ಲಿ ಯಾರನ್ನಾದರೂ ಮದುವೆ ಆಗಬಹುದು. ಅನಾಥಾಶ್ರಮಗಳಲ್ಲಿರುವ ಕನ್ಯೆಯನ್ನು ವರಿಸಬಹುದು.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.