ನೃತ್ಯ ಕಾರ್ಯಕ್ರಮ ಮಾರ್ಗಂ
ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 19-7-2013, ಶುಕ್ರವಾರದಂದು ನೃತ್ಯ ಕಲಾವಿದೆ ಕು. ಸಿಂಧು ಭಾಸ್ಕರಂ ಅವರ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 6ನೇ ವಯಸ್ಸಿನಿಂದಲೇ ಹನುಮಂತನಗರದ ಬಿಂಬ ಮಕ್ಕಳ ಸಂಸ್ಥೆಯಲ್ಲಿ ತಮ್ಮ ನಾಟಕ, ಚಿತ್ರಕಲೆ, ಸಂಗೀತ ಹಾಗೂ ನೃತ್ಯಾಭಿರುಚಿಯಲ್ಲಿ ತರಬೇತಿ ಪಡೆದ ಕು. ಸಿಂಧು, 2007ರಲ್ಲಿ ದಿಲ್ಲಿಯಲ್ಲಿ ನಡೆದ ಎನ್.ಸಿ.ಸಿ. ರಾಷ್ಟ್ರೀಯ ಭಾವೈಕ್ಯತಾ ನೃತ್ಯ ಕಾರ್ಯಕ್ರಮದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಕೂಡ ತಂದಿದ್ದಾರೆ.
ಪ್ರಸ್ತುತ ಬೆಂಗಳೂರಿನ 'ನಾಟ್ಯ ನಿಕೇತನ'ದಲ್ಲಿ ಗುರು ರೇವತಿ ನರಸಿಂಹನ್ ಅವರಲ್ಲಿ ನಾಟ್ಯ ತರಬೇತಿ ಪಡೆಯುತ್ತಿದ್ದು, ಜುಲೈ 19ರಂದು ನಗರದ ಎ.ಡಿ.ಎ. ರಂಗಮಂದಿರದಲ್ಲಿ 'ಮಾರ್ಗಂ' ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನೃತ್ಯ ಕಲಾವಿದೆ ಪದ್ಮಿನಿ ರವಿ ಹಾಗೂ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ದಿನಾಂಕ: 19-07-2013
ಸ್ಥಳ: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ. ರಸ್ತೆ, ಬೆಂಗಳೂರು.
ಸಮಯ: ಸಂಜೆ 6.15ಕ್ಕೆ.