ಸಿವಿಲ್ ಪ್ರಕರಣ ಕೋರ್ಟ್‌ಗೆ
ಸಾಮಾನ್ಯವಾಗಿ ಪೊಲೀಸ್ ಠಾಣೆ, ಪೊಲೀಸರು ಎಂದರೆ ತಮ್ಮೆಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುವುದು, ಹಾಗೂ ಅಲ್ಲಿಯೇ ದೂರು ದಾಖಲಿಸುವುದು ಎಂಬ ಭಾವನೆ ಜನರದ್ದು.
ಜನರ ಸಮಸ್ಯೆ ಆಲಿಸುವುದು, ಸಮಾಜದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವುದು ಪೊಲೀಸರ ಕರ್ತವ್ಯವೇ. ಆದರೆ, ಕೌಟುಂಬಿಕ ಕಲಹದಂತಹ(ಸಿವಿಲ್ ಪ್ರಕರಣ) ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳುವುದಿಲ್ಲ ಹಾಗೂ ಅವರು ಆ ಸಂಬಂಧ ಗಮನಹರಿಸುವುದಿಲ್ಲ.
ಒಂದು ವೇಳೆ ಸಾರ್ವಜನಿಕರು ಸಿವಿಲ್ ತ್ಯಾಜ್ಯಗಳನ್ನು ಹಿಡಿದು ಠಾಣೆಗೆ ಹೋದರೂ ಸಹ ಆ ಬಗ್ಗೆ ಕೂಲಂಕಷವಾಗಿ ಆಲಿಸುವ ಪೊಲೀಸರು ತಮ್ಮ ವ್ಯಾಪ್ತಿಗೆ ಬರುವುದಾದಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಇಲ್ಲವಾದಲ್ಲಿ ಸಂಬಂಧಪಟ್ಟ ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸಿಕೊಡುತ್ತಾರೆ. ಸಾರ್ವಜನಿಕರು ಅಲ್ಲಿಯೇ ದೂರು ದಾಖಲಿಸಬೇಕು. ಕೌಟುಂಬಿಕ ನ್ಯಾಯಾಲಯದಲ್ಲಿನ ಸಂಬಂಧಪಟ್ಟ ಅಧಿಕಾರಿಗಳು ಆ ಬಗ್ಗೆ ಗಮನಹರಿಸುತ್ತಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಿಗೆ ಹೆಚ್ಚಾಗಿ ಕೌಟುಂಬಿಕ ಕಲಹಗಳೇ ಹೆಚ್ಚಾಗಿ ಬರುತ್ತಿವೆ. ಇದರಿಂದ ಪೊಲೀಸರಿಗೆ ಬೇರೆ ಪ್ರಕರಣಗಳತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಕರಣದ ತನಿಖೆಗಳು ವಿಳಂಬವಾಗುತ್ತಿವೆ ಎಂಬ ಆರೋಪಗಳು ಪೊಲೀಸರಿಂದ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹಗಳನ್ನು ಹಿಡಿದು ಪೊಲೀಸ್ ಠಾಣೆ ಮೆಟ್ಟಿಲು ಏರದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಪೊಲೀಸರು ಚಿಂತಿಸಿದ್ದಾರೆ. ಸಾರ್ವಜನಿಕರು ಸಹ ಸಿವಿಲ್ ತ್ಯಾಜ್ಯ ಹಿಡಿದು ಠಾಣೆಗೆ ಹೋಗುವುದರ ಬದಲು ಸಂಬಂಧಪಟ್ಟ ಕೌಟುಂಬಿಕ ನ್ಯಾಯಾಲಯಗಳಿಗೆ ಹೋಗುವಂತೆ ಪೊಲೀಸರು ಮನವಿ ಮಾಡಿದ್ದಾರೆ.
-ಶಾಂತ ತಮ್ಮಯ್ಯ