ರಂಗೋಲಿಯಲ್ಲಿ ಡ್ರಮ್‌ಜಮ್ ಕಲರವ
ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ಡ್ರಮ್‌ಜಮ್ ಜತೆ ಎರಡನೇ ಸೆಷನ್‌ನ ಡ್ರಮ್ ನುಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ತಿಂಗಳಲ್ಲಿ ಒಂದು ದಿನ ಈ ಕಾರ್ಯಕ್ರಮವನ್ನು ನಡೆಸಲಾಗು ವುದು. ಜುಲೈ ತಿಂಗಳ ಕಾರ್ಯಕ್ರಮರ 21ರಂದು ನಡೆಯಲಿದೆ. ಇದು ಡ್ರಮ್‌ಜಮ್‌ನ ಎರಡನೇ ಸೆಷನ್. ಭಾರತದಲ್ಲಿ ರಿದಮ್ ಆಧಾರಿತ ಚಟುವಟಿಕೆಗಳ ಕಾರ್ಯಕ್ರಮಗಳ ಆದ್ಯ ಪ್ರವರ್ತಕ ಈ ಡ್ರಮ್‌ಜಮ್. ರಾಬರ್ಟ್ ನರೇನ್ ಹಾಗೂ ಹಾಡುಗಾರ್ತಿ-ನಟಿ ವಸುಂಧರಾ ದಾಸ್ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಲಿದ್ದಾರೆ.
ಗುಂಪು ಡ್ರಮ್ಮಿಂಗ್‌ನಿಂದ ಮನಸ್ಸಿನ ಒತ್ತಡ ನಿವಾರಣೆ, ಪರಸ್ಪರರಲ್ಲಿ ಆತ್ಮೀಯತೆ, ಸಂವಹನದಿಂದ ಪರಸ್ಪರರ ನಡುವೆ ಇರುವ ಅಡೆತಡೆ ನಿವಾರಣೆಯಾಗಿ ಬಾಂಧವ್ಯವೇರ್ಪಡಲು ಸಹಾಯಕವಾಗುತ್ತದೆ ಎನ್ನುತ್ತಾರೆ ಆಯೋಜಕರು. ಈ ಕಾರಣಕ್ಕೆ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ಸಾರ್ವಜನಿಕರಿಗಾಗಿ ಪ್ರತಿ ತಿಂಗಳು ಡ್ರಮ್‌ಜಮ್ ಜತೆ ಈ ಸಮುದಾಯ ಸೆಷನ್ ಏರ್ಪಡಿಸುತ್ತಾ ಬಂದಿದೆ. ಸಂಗೀತದಲ್ಲಿ ಯಾವುದೇ ಅನುಭವ ಇಲ್ಲದ ಯಾರು ಬೇಕಾದರೂ ಭಾಗವಹಿಸಬಹುದು. ಪ್ರವೇಶ ಉಚಿತ. ಸುಮಾರು 200 ಸಂಗೀತ ವಾದ್ಯಗಳನ್ನು ಡ್ರಮ್‌ಜಮ್ ಒದಗಿಸುತ್ತಿದೆ. ಭಾಗವಹಿಸುವವರು ತಮ್ಮೊಂದಿಗೆ ತಾಳವಾದ್ಯ ಸಾಧನಗಳನ್ನು ತರಬೇಕು.
ಹೆಚ್ಚಿನ ಮಾಹಿತಿಗೆ 080-22969265 ಸಂಪರ್ಕಿಸಬಹುದು.
ದಿನಾಂಕ: 21 ಜುಲೈ, 2013
ಸ್ಥಳ: ರಂಗೋಲಿ ಮೆಟ್ರೋ ಆರ್ಟ್ ಸೆಂಟರ್,
ಎಂ.ಜಿ. ರಸ್ತೆ, ಬೆಂಗಳೂರು.
ಸಮಯ: ಸಂಜೆ 4 ಗಂಟೆ ನಂತರ.