ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾಳ ಬೆಳಕು!

Lingaraj Badiger
Updated On : 23 Jul 2013, 1:07 am

ಪದೇಪದೇ ಕೈಕೊಡುವ ವಿದ್ಯುತ್ತಿನ ತಲೆಬಿಸಿ ರೈತರಿಗೆ ಇದ್ದಿದ್ದೇ. ಆದರೆ, ಇಲ್ಲೊಬ್ಬರು ರೈತನ ಮನೆಯಲ್ಲಿ 24 ಗಂಟೆ ವಿದ್ಯುತ್ ಇರುತ್ತದೆ. 365 ದಿನಗಳಲ್ಲಿ ಇವರ ಮನೆಯಲ್ಲಿ ಕರೆಂಟಿಲ್ಲ ಎಂಬ ಕಂಪ್ಲೇಂಟಿಲ್ಲ!

ವಿಂಡ್ ಆ್ಯಂಡ್ ಸೋಲಾರ್ ಹೈಬ್ರೀಡ್ ಸಿಸ್ಟಂನ ಕೃಪೆ ಇದು. ಪವನ ಶಕ್ತಿ, ಸೌರಶಕ್ತಿಯಿಂದಾಗಿ ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿಯ ರೈತ ಬಾಳನಗೌಡರ ಮನೆಯಲ್ಲಿ ಸದಾ ಬೆಳಕಿರುತ್ತದೆ. ಮನೆಯ ಮೇಲೆ ಪವನ ಶಕ್ತಿ, ಸೋಲಾರ್ ಪ್ಲೇಟ್ ಅಳವಡಿಸಿ ಕರೆಂಟ್ ತಯಾರಿಸುತ್ತಾರೆ.

ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಕಾಮನ್. ಕರೆಂಟಿಲ್ಲ ಎಂದರೆ ರೈತರು ಬೀದಿಗಿಳಿದು ಹೋರಾಡುತ್ತಾರೆ. ಮತ್ತೆ ಕೆಲವರು ತಾತ್ಕಾಲಿಕ ಇನ್ವರ್ಟರ್ ಸಿಸ್ಟಂ ಬಳಸುತ್ತಾರೆ. ಇನ್ನು ಕೆಲ ರೈತರು ಸೌರವಿದ್ಯುತ್‌ಗೆ ಮೊರೆ ಹೋಗುತ್ತಾರೆ. ಆದರೆ, ಸೋಲಾರ್ ಬಿಸಿಲಿದ್ದ ಕಾಲಕ್ಕೆ ಮಾತ್ರ ಉಪಯೋಗವಾಗುತ್ತದೆ. ಆದರೆ ಬಾಳನಗೌಡ ಸೂರ್ಯನ ಬೆಳಕು ಹಾಗೂ ಗಾಳಿ ಎರಡನ್ನೂ ಬಳಸುವುದರಿಂದ ಅವರ ಮನೆಯಲ್ಲಿ ಸದಾ ಕರೆಂಟಿರುತ್ತದೆ.

ಸಬ್ಸಿಡಿ ಇದೆ!
ಸರ್ಕಾರದಲ್ಲಿ ಹಲವು ಯೋಜನೆಗಳಿದ್ದರೂ ಜನರಿಗೆ ಅದರ ಉಪಯೋಗ ಗೊತ್ತಾಗದು. ವಿಂಡ್ ಆ್ಯಂಡ್ ಸೋಲಾರ್ ಹೈಬ್ರೀಡ್ ಸಿಸ್ಟಂಗೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ದಿನದ 24 ಗಂಟೆ ಸೂರ್ಯನ ಕಿರಣಗಳು ಇರುವುದಿಲ್ಲ, ಗಾಳಿ ಮತ್ತು ಸೂರ್ಯನ ತಾಪ ಮಾತ್ರ ಎಲ್ಲಾ ಕಾಲಕ್ಕೂ ಇರುತ್ತದೆ. ಇದರಿಂದಾಗಿ ವಿಂಡ್ ಆ್ಯಂಡ್ ಸೋಲಾರ್ ಅತ್ಯಂತ ಉಪಯುಕ್ತ. 100 ವ್ಯಾಟ್‌ನಿಂದ 100 ಕಿಲೋ ವ್ಯಾಟ್‌ವರೆಗೆ ಗಾಳಿಯಿಂದ ಮತ್ತು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಬಹುದು. ಒಟ್ಟು ರು. 20 ಸಾವಿರ ಬೇಕಾಗುತ್ತದೆ.

8 ಕಿಲೋವ್ಯಾಟ್ ಉತ್ಪಾದನೆ
ಅರ್ಧ ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸಲು ರು. 95 ಸಾವಿರ ಖರ್ಚಾಗಲಿದ್ದು, ಇದರಿಂದ ಒಂದು ಮನೆಗೆ 24 ಗಂಟೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಲು ಸಾಧ್ಯ. 7 ವರ್ಷದ ಹಿಂದೆಯೇ ಈ ಪದ್ಧತಿಯನ್ನು ಅಳವಡಿಸಿದ್ದಾರೆ ಗೌಡರು. ಏರ್‌ಕೂಲರ್, ಫ್ರಿಡ್ಜ್, ಫ್ಯಾನ್, ಟಿವಿ ಎಲ್ಲವೂ ವಿಂಡ್ ಮತ್ತು ಸೋಲಾರ್ ಸಿಸ್ಟಂನಿಂದ ಕೆಲಸ ಮಾಡುತ್ತವಂತೆ.

ಸರ್ವಕಾಲಕ್ಕೂ ಸೈ
ಈ ಸಿಸ್ಟಂ ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಗಾಳಿ ಚೆನ್ನಾಗಿ ಬರುತ್ತದೆ. ವಿದ್ಯುತ್ ಉತ್ಪಾದನೆಗೆ ಸೂಕ್ತ ವಾತಾವರಣ ಇರುತ್ತದೆ. ಮಕ್ಕಳಿಗೆ ಓದಲೂ ಸಹಕಾರಿ. ಇದನ್ನು ರಾಜ್ಯದಲ್ಲಿ ಹೆಚ್ಚಾಗಿ ಅನುಷ್ಠಾನಗೊಳಿಸುವ (ಬೀದಿ ದೀಪಗಳಿಗೆ, ವೈಯಕ್ತಿಕ ಮನೆಗಳಿಗೆ) ನಿಟ್ಟಿನಲ್ಲಿ ಪ್ರಾಜೆಕ್ಟ್ ರಿಪೋರ್ಟನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಪದ್ಧತಿ ಜಾರಿಯಾದರೆ ವಿದ್ಯುತ್‌ಗಾಗಿ ಕೇವಲ ಕೆಇಬಿಗೆ ಮೊರೆ ಹೋಗುವುದು ಕಡಿಮೆಯಾಗುತ್ತದೆ. ಸೋಲಾರ್ ಸಪ್ಲೈಯರ್ಸ್ ಬಗ್ಗೆ ಮಾಹಿತಿಯನ್ನು mnre.gov.in ವೆಬ್‌ಸೈಟ್‌ನಲ್ಲಿ ಪಡೆಯಬಹುದು.
- ಡಾ. ನಾಗನಗೌಡ, ಕರ್ನಾಟಕ ಪವರ್ ಕಾರ್ಪೋರೇಷನ್, ಮೊ. 8748899429

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments