ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪೇದೆಗಳು ದೂರು ದಾಖಲಿಸಿಕೊಳ್ಳುವಂತಿಲ್ಲ

Mainashree
Updated On : 26 Jul 2013, 1:10 am

ತಮ್ಮ ದೂರುಗಳನ್ನು ದಾಖಲಿಸಲು ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಕುಂದುಕೊರತೆಗಳನ್ನು ಅಲ್ಲಿನ ಪೊಲೀಸ್ ಸಿಬ್ಬಂದಿ ಆಲಿಸಬಹುದು. ಆದರೆ, ಎಲ್ಲರೂ ದೂರು ದಾಖಲಿಸಿಕೊಳ್ಳುವಂತಿಲ್ಲ. ಮುಖ್ಯ ಪೊಲೀಸ್ ಪೇದೆ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ದೂರು ದಾಖಲಿಸಿಕೊಳ್ಳಬಹುದು. ಒಂದು ವೇಳೆ ಜನ ದೂರು ದಾಖಲಿಸಲು ಬಂದಾಗ ಠಾಣೆಯಲ್ಲಿ ಹಿರಿಯ ಸಿಬ್ಬಂದಿ ಇಲ್ಲದಿದ್ದಲ್ಲಿ ಅವರ ಅನುಪಸ್ಥಿತಿಯಲ್ಲಿ ಕಿರಿಯ ಸಿಬ್ಬಂದಿ ದೂರು ದಾಖಲಿಸಿಕೊಳ್ಳುವಂತಿಲ್ಲ. ಅವರು ಬರುವವರೆಗೂ ದೂರುದಾರರು ಕಾಯಬೇಕು.
ಪ್ರತಿ ಪ್ರಕರಣಗಳಿಗೆ ಪ್ರತ್ಯೇಕ ಠಾಣಾ ಬರಹಗಾರ(ರೈಟರ್) ಇರುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ, ಆತ್ಮಹತ್ಯೆಯಂತಹ ದೂರುಗಳನ್ನು ದಾಖಲಿಸಿಕೊಂಡು ಅವುಗಳ ತನಿಖೆ ಯಾವ ಹಂತಕ್ಕೆ ಬಂದಿದೆ, ಆರೋಪಿ ಪತ್ತೆಯಾದನೇ ಇಲ್ಲವೆ, ಯಾವ ಪ್ರಕರಣ ಯಾವ ಹಂತದಲ್ಲಿದೆ ಎಂಬಿತ್ಯಾದಿ ಬಗ್ಗೆ ಅವರೇ ಗಮನಹರಿಸುತ್ತಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ಬೇಕಾದಲ್ಲಿ ಅವರೇ ಮಾಹಿತಿ ನೀಡುತ್ತಾರೆ. ಅವರ ಅನುಪಸ್ಥಿತಿಯಲ್ಲಿ, ಒಂದೆರಡು ದಿನದಲ್ಲಿ ಬೇರೆಯವರು ಕೆಲಸ ನಿರ್ವಹಿಸುತ್ತಾರೆ.
ಒಂದು ವೇಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದಲ್ಲಿ ಅಥವಾ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಲು ಹಣ ಕೇಳಿದಲ್ಲಿ ಅದೇ ಠಾಣೆಯಲ್ಲಿ ದೂರು ದಾಖಲಿಸಬೇಕೆಂದಿಲ್ಲ. ಸಂಬಂಧಪಟ್ಟ ಡಿಸಿಪಿ, ಎಸಿಪಿ ಕಚೇರಿ ಅಥವಾ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಬಹುದು. ಆ ದೂರನ್ನು ಪರಿಶೀಲಿಸುವ ಹಿರಿಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸುವಂತೆ ಸಂಬಂಧಪಟ್ಟ ಠಾಣೆ ಇನ್ಸ್ಪೆಕ್ಟರ್ಗೆ ಆದೇಶಿಸುತ್ತಾರೆ. ಆಗಲೂ ದೂರು ದಾಖಲಿಸಿಕೊಳ್ಳದಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಸಂಬಂಧಪಟ್ಟವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತಾರೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement