ಆಸೆ ಮತ್ತು ಆಸಕ್ತಿ
`ನನ್ನಲ್ಲಿ ಆಸೆಗಳಿಲ್ಲ.
ನನ್ನಲ್ಲಿ ಆಸೆಗಳಿಲ್ಲದ್ದರಿಂದ
ನಾನು ಮಹತ್ವಾಕಾಂಕ್ಷಿಯಲ್ಲ.
ನನ್ನಲ್ಲಿ ಮಹತ್ವಾಕಾಂಕ್ಷೆಗಳಿಲ್ಲದ್ದರಿಂದ
ನಾನು ಶ್ರಮಪಡುವುದಿಲ್ಲ.
ನಾನು ಶ್ರಮಪಡುವುದಿಲ್ಲವಾದ್ದರಿಂದ
ನಾನು ಸ್ಪಧರ್ಿಸುವುದಿಲ್ಲ.
ನಾನು ಸ್ಪಧರ್ಿಸುವುದಿಲ್ಲವಾದ್ದರಿಂದ
ನಾನು ಸೋಲುವುದಿಲ್ಲ.
ನಾನು ಸೋಲುವುದಿಲ್ಲವಾದ್ದರಿಂದ
ನಾನು ಗೆಲ್ಲುತ್ತೇನೆ.
ಗೆಲುವು ನನ್ನದೇ.'
-ಲಾವು ತ್ಸು
ಭೌತಿಕವಾದ ಪ್ರಪಂಚದಲ್ಲಿ ನಮ್ಮ ದುಃಖ ತೊಂದರೆ, ತಾಪತ್ರಯಗಳಿಗೆ ಆಸೆಯೇ ಮೂಲ ಕಾರಣ. ನಮ್ಮ ಜೀವನದಲ್ಲಿ ನಾವು ನಮ್ಮ ಆಸೆಗಳನ್ನು ಪೂರೈಸಿಕೊಳ್ಳುವು ದಕ್ಕಾಗಿಯೇ ಶ್ರಮಪಡುತ್ತೇವೆ. ನಾವು ಸದಾ ನಮ್ಮ ಆಸೆ ಪೂರೈಸಿದರೆ ಸಂತುಷ್ಟರಾಗಿರುತ್ತೇವೆ ಎಂಬ ಭ್ರಮೆಯಲ್ಲಿಯೇ ಇರುತ್ತೇವೆ. ಆದರೆ ಇದು ಸತ್ಯಕ್ಕೆ ದೂರ ವಾದ ವಿಷಯ. ಏಕೆಂದರೆ, ನಮ್ಮ ಮನಸ್ಸು ಚಂಚಲ. ಅದು ಸದಾ ಅತ್ತಿಂದ ಇತ್ತ, ಇತ್ತಲಿಂದ ಅತ್ತ ಅಲೆದಾಡು ತ್ತಲೇ ಇರುತ್ತದೆ. ವಿಚಾರಗಳು ಯಾವತ್ತೂ ಒಂದು ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ. ಅವು ನಮ್ಮ ಸ್ವಾಧೀನದಲ್ಲಿಯೂ ಇರುವುದಿಲ್ಲ. ಅದರದೇ ಆದ ಮಾದರಿಯಲ್ಲಿ ಅದು ಪೂವರ್ಾಗ್ರಹಪೀಡಿತವಾಗಿ ಅಲೆದಾಡುತ್ತಿರುತ್ತದೆ. ನಮಗೆ ಬೇಕಾದದ್ದು ದಕ್ಕಿದೊಡನೆ ನಮ್ಮ ಮನಸ್ಸು ಇನ್ನೇನನ್ನೋ ಆಸೆ ಪಡುತ್ತದೆ ಅಥವಾ ಒಮ್ಮೆ ನಮ್ಮ ಆಸೆ ಈಡೇರಿದ ಮೇಲೆ ಅದರ ಬಗ್ಗೆ ನಮಗಿರುವ ಮೋಹ ಕಡಿಮೆಯಾಗಿ ಇನ್ನೊಂದರೆಡೆಗೆ ನಾವು ಆಕಷರ್ಿತರಾಗುತ್ತೇವೆ. ಪುನಃ ನಾವು ಇನ್ನೊಂದು ಆಸೆಯ ಬೆನ್ನು ಹತ್ತಿ ಓಡಲಾರಂಭಿಸುತ್ತೇವೆ. ಏನನ್ನಾದರೂ ಪಡೆದ ಸಂತೃಪ್ತಿ ಕೇವಲ ಕ್ಷಣಿಕ. ಏಕೆಂದರೆ, ಬಯಸಿದ್ದನ್ನು ಪಡೆದ ಮರುಕ್ಷಣದಿಂದ, ಸುಪ್ತವಾಗಿದ್ದ ಇನ್ನಿತರ ಆಸೆಗಳು ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಪರಿಣಾಮವಾಗಿ, ನಮ್ಮ ಮನಸ್ಸು ಹೆಚ್ಚು ಕಾಲ ಸುಖವನ್ನು ಅನುಭವಿಸದೆಯೇ ಇನ್ನಿತರ ಬೇಕುಗಳನ್ನು ಹುಡುಕುತ್ತ ಸಾಗುತ್ತಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಮನಸ್ಸು ಯಾವತ್ತೂ ಆಸೆಯಿಂದ ಹೊರಬರುವುದೇ ಇಲ್ಲ.
ಬಹಳಷ್ಟು ಜನರಿಗೆ, ಮನೆ ಕಟ್ಟುವುದೋ, ವಾಹನ ಕೊಳ್ಳುವುದೋ, ಪ್ರಶಸ್ತಿ ಪಡೆಯುವುದೋ ಮೊದಲಾದವುಗಳೇ ಜೀವನದ ಗುರಿಯಾಗಿರುತ್ತದೆ. ಆದರೆ ನಮ್ಮ ಜೀವನ ಎನ್ನುವುದು ಅಶಾಶ್ವತವಾದ ವಸ್ತುಗಳನ್ನು ಬಯಸಿ ಸಮಯ ಕಳೆಯುವಷ್ಟು ಅಗ್ಗವಲ್ಲ. ಆಸೆ ಆಗಾಗ ಬದಲಾಗುವುದರಿಂದ ವಸ್ತುಗಳು ಅಥವಾ ಅವಶ್ಯಕತೆಗಳೂ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಇರುತ್ತವೆ. ವಸ್ತು ಒಂದೇ ಇದ್ದರೂ ಬೇಸಿಗೆಯಲ್ಲಿ-ಚಳಿಗಾಲದಲ್ಲಿ, ಎಚ್ಚರಾಗಿರುವಾಗ-ಮಲಗಿದಾಗ, ಒಂಟಿ ಯಾಗಿರುವಾಗ-ಪ್ರೀತಿಪಾತ್ರರೊಂದಿಗಿರು ವಾಗ, ಹಸಿದಾಗ-ಹೊಟ್ಟೆ ತುಂಬಿದಾಗ, ಸಮಾಧಾನದಲ್ಲಿರುವಾಗ-ಸಿಟ್ಟಿನಲ್ಲಿರುವಾಗ, ಸುಸ್ತಾದಾಗ-ಉಲ್ಲಾಸದಲ್ಲಿರುವಾಗ, ಎಲ್ಲಕ್ಕಿಂತ ಮಿಗಿಲಾಗಿ ಬಾಲ್ಯ, ಯೌವನ, ವೃದ್ಧಾಪ್ಯ ಹೀಗೆ ಸಂದರ್ಭಕ್ಕೆ, ಸಮಯಕ್ಕೆ ಅನುಗುಣವಾಗಿ ನಮ್ಮ ಅವಶ್ಯಕತೆಗಳು ಬದಲಾಗುತ್ತವೆ. ಕೆಲ ಕಾಲದವರೆಗೆ ಅವಶ್ಯಕತೆಯನ್ನು, ಆಸೆಯನ್ನು ನಿದರ್ಿಷ್ಟವಾಗಿ ಟ್ಟುಕೊಳ್ಳುವವರು ವಿರಳ. ಕಾಲಕ್ರಮೇಣ ನಮ್ಮ ಅಭಿಪ್ರಾಯಗಳೂ, ಅವಶ್ಯಕತೆಗಳೂ ಬದಲಾಗುತ್ತವೆ.
ಆಸೆಯ ಓಟ ಒಳಗಿನ ಮನಃಸ್ಥಿತಿ ಮತ್ತು ಹೊರಗಿನ ವಾತಾವರಣವನ್ನು ಅವಲಂಬಿಸಿರುತ್ತದೆ. ಈ ಎರಡೂ ವಸ್ತುಗಳು ಸ್ಥಿರವಲ್ಲವಾದ್ದರಿಂದ ಅದನ್ನು ಹತೋಟಿ ಯಲ್ಲಿಡುವುದು ತುಂಬಾ ಕಷ್ಟ. ಆಸೆಯೆಂಬುದು ಆ ಕ್ಷಣಕ್ಕೆ ಸಂಬಂಧಪಟ್ಟ ದ್ದಾದರೂ ಜೀವನದ ಮುಖ್ಯ ಉದ್ದೇಶವಾಗಿ ಮಾರ್ಪಡುತ್ತದೆ. ಆದ್ದರಿಂದ ಯಾವುದು ಸರಿ-ಯಾವುದು ತಪ್ಪು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರಕುವವರೆಗೆ ಆಸೆಯ ಬೆನ್ನು ಹತ್ತಿ ಓಡುವುದು
ವ್ಯರ್ಥ.
ನಾವು ನಮ್ಮ ಅಪ್ರಬುದ್ಧತೆಯಿಂದಲೋ ಅಥವಾ ಸರಿಯಾಗಿ ಯೋಚಿಸದೆಯೋ, ಯಾವುದು ಪ್ರಮುಖವಲ್ಲವೋ, ಪ್ರಯೋ ಜನಕಾರಿಯಲ್ಲವೋ ಅದಕ್ಕೆ ಮಹತ್ವ ಕೊಟ್ಟು, ಅದರ ಫಲ ಬಂದ ಮೇಲೆ ಪಶ್ಚಾತ್ತಾಪ ಪಡುವುದುಂಟು. ಸರಿಯಾದ ಮೆಟ್ಟಿಲನ್ನು ಗುರುತಿಸದೆಯೇ, ಮೇಲೆ ತಲುಪಿದ ಮೇಲೆ ನಾವು ಏರಬೇಕಾದದ್ದು ಇದಲ್ಲವಾಗಿತ್ತು ಎಂದು ತಿಳಿದಂತೆ ಮಗುವೊಂದು ಬೆಂಕಿಯ ಕಡೆ ಆಕಷರ್ಿತವಾಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸುತ್ತದೆ. ಕೈ ಸುಟ್ಟಾಗ ಅಳುತ್ತದೆ. ಹಾಗೆಯೇ, ಮದುವೆಯಾಗಿಯೋ, ಉದ್ಯೋಗ-ಉದ್ದಿಮೆ ಆರಂಭಿಸಿಯೋ, ಹಲವು ದಿನ ಕಳೆದ ಮೇಲೆ ನಮ್ಮ ನಿರ್ಣಯ ಸರಿಯಾಗಿರಲಿಲ್ಲ ಎಂದು ಅನಿಸುವುದುಂಟು. ಉದಾಹರಣೆಗೆ, ಒಬ್ಬ ಒಂದು ಮನೆಯನ್ನು ಕೊಂಡುಕೊಂಡು ತುಂಬಾ ಸಂತಸದಲ್ಲಿರುತ್ತಾನೆ. ಕ್ರಮೇಣ ಪಕ್ಕದ ಮನೆಯವರು ತೊಂದರೆದಾಯಕರಾಗಿ ಕಾಣುತ್ತಾರೆ. ಸುತ್ತಲಿನ ವಾತಾವರಣ ಬದಲಾಗಿ, ಉಸಿರು ಕಟ್ಟಿದ ಅನುಭವವಾಗುತ್ತದೆ. ಹಲವರಿಗೆ ತಮ್ಮ ಮಕ್ಕಳು ಬಾಲ್ಯದಲ್ಲಿ ಚೆನ್ನಾಗಿದ್ದವರು, ಯೌವ್ವನದಲ್ಲಿ ಬದಲಾಗಿ ತಲೆ ನೋವಿಗೆ ಕಾರಣರಾಗಿದ್ದಾರೆ ಎಂದೆನಿಸುತ್ತದೆ. ನಾವು ಇಲ್ಲಿ ಮನೆ ಕೊಳ್ಳಬಾರದಿತ್ತು. ಮಗು ಚಿಕ್ಕದಿರುವಾಗ ಹಾಗೆ ಮಾಡಬಾರದಿತ್ತು ಎಂದೆಲ್ಲ ಆ ಮೇಲೆ ಅನಿಸುವುದುಂಟು.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ