ಸೋನು ನಿಗಮ್ ಜನುಮ ದಿನ
1973.
ಬಹುಭಾಷಾ ಹಿನ್ನೆಲೆ ಗಾಯಕ.
ಹಿಂದಿ, ಕನ್ನಡಗಳಲ್ಲಿ ಅಧಿಕ ಸಂಖ್ಯೆಯಹಾಡುಗಳನ್ನು ಹಾಡಿದ್ದಾರೆ. ಉರ್ದು, ತಮಿಳು, ಅಸ್ಸಾಮಿ, ಒರಿಯಾ, ಪಂಜಾಬಿ, ಬೆಂಗಾಲಿ, ಮಲೆಯಾಳಂ, ತೆಲುಗು, ನೇಪಾಳಿ ಭಾಷೆಗಳಲ್ಲೂ ಹಾಡಿದ ಹಿರಿಮೆ.
ಜೋಸೆಫ್ ಕುಕ್ ಪುಣ್ಯತಿಥಿ
1860-1947.
ಆಸ್ಟ್ರೇಲಿಯಾದ 6ನೇ ಪ್ರಧಾನಿ.
ರಾಜಕೀಯ ಪ್ರವೇಶಕ್ಕೆ ಮುನ್ನ ಕಲ್ಲಿದ್ದಲು ಗಣಿ ಕಾರ್ಮಿಕ.
ಆಸ್ಟ್ರೇಲಿಯನ್ ಲೇಬರ್ ಪಾರ್ಟಿ ಸ್ಥಾಪಕರಲ್ಲಿ ಒಬ್ಬರು.
ದಿನಚರಿತೆ
1974- ವಾಟರ್ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಶ್ವೇತಭವನದಲ್ಲಿದ್ದ ದಾಖಲೆಗಳನ್ನು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಿದರು.
2012- ಪವರ್ ಗ್ರಿಡ್ ವೈಫಲ್ಯದಿಂದ ಉತ್ತರ ಭಾರತದ ಏಳು ರಾಜ್ಯಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.
ಟ್ವೀಟ್ಸ್ಟಾಲ್
ತಮ್ಮ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ರುಚಿಯನ್ನು ಬಹುತೇಕ ಶಿಕ್ಷಕರು ನೋಡುವುದಿಲ್ಲ ಎನ್ನುವುದು ನಿಜಕ್ಕೂ ನಿರಾಸೆಯ ಸಂಗತಿ.
-ಶಶಿ ತರೂರ್