ಹೇರ್ ಹರೋಹರ!
ಧೋ ಎಂದು ಸುರಿವ ಮಳೆಯಲ್ಲಿ ನೆನೆಯೋದು ಯಾರಿಗೆ ತಾನೇ ಖುಷಿ ತರಲ್ಲ? ಬ್ಯೂಟಿಷಿಯನ್ಗಳು ಮಾತ್ರ ಮಳೇಲಿ ನೆನೀಬೇಡಿ. ಕೂದಲು ಹಾಳಾಗುತ್ತೆ ಅಂತಾರೆ...
ಮಳೆಗಾಲ ಬಂತೆಂದರೆ ಬಾಲಿವುಡ್ ತಾರೆ ನರ್ಗಿಸ್ ಫಕ್ರಿ ಗಡಗಡ ನಡುಗುತ್ತಾಳೆ. ಮಳೆಗೆ ಹೆದರಿ ಅಲ್ಲ, ಹೇರ್ಸ್ಟೈಲ್ ಹಾಳಾಗುತ್ತದೆಂಬ ಅಂಜಿಕೆ ಅವಳದು. ಮುಂಗಾರು ಮುಗಿವವರೆಗೂ ಆಕೆಯ ದಿನಚರಿಯೇ ಬದಲು. ಶೂಟಿಂಗ್ ಇದ್ದರೂ ಎಷ್ಟು ಬ್ಯುಸಿಯಾಗಿದ್ದರೂ ದಿನಕ್ಕೆ 20 ನಿಮಿಷವಾದರೂ ಕೂದಲ ಆರೈಕೆಗೆ ಮೀಸಲು. ವಾರಕ್ಕೊಮ್ಮೆಯಾದರೂ ಉಗುರು ಬೆಚ್ಚಗಿನ ತೆಂಗಿನೆಣ್ಣೆ ಹಾಕಿಸಿಕೊಂಡು ಮೆಲ್ಲಗೆ ಮಸಾಜ್ ಮಾಡಿಸಿಕೊಳ್ಳದಿದ್ದರೆ ನೆಮ್ಮದಿಯೇ ಇಲ್ಲ.
ಧೋ ಎಂದು ಸುರಿವ ಮಳೆಯಲ್ಲಿ ನೆನೆಯೋದು ಯಾರಿಗೆ ತಾನೇ ಖುಷಿ ತರಲ್ಲ? ಬ್ಯೂಟಿಷಿಯನ್ಗಳು ಮಾತ್ರ ಮಳೇಲಿ ನೆನೀಬೇಡಿ. ಕೂದಲು ಹಾಳಾಗುತ್ತೆ ಅಂತಾರೆ. ಕೋಮಲ, ನೇರ, ಸೊಟ್ಟ, ದಪ್ಪ ಅಥವಾ ಸಪೂರ, ಕೇಶ ಹೇಗೇ ಇರಲಿ, ಮಳೆಗಾಲದಲ್ಲಿ ಹೊಳಪು, ನುಣುಪು ಎಲ್ಲ ಮಾಯವೇ. ಮುಂಗಾರು ಮುಗಿವವರೆಗೂ ನಮ್ಮ ಮಂಡೆ ಹವಾಮಾನದ ಹಿಡಿತದಲ್ಲಿ.
ಮಳೆ ನೀರಿನಲ್ಲಿನ ಅನೇಕ ಬ್ಯಾಕ್ಟೀರಿಯಾಗಳು ಕೂದಲ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ತುರಿಕೆ, ಹೊಟ್ಟು, ಕೂದಲು ಉದುರುವುದು ಮತ್ತಿತರ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಳೆನೀರಿನಲ್ಲಿರುವ ಖನಿಜಾಂಶಗಳಾದ ಕ್ಯಾಲ್ಷಿಯಂನಿಂದ ಕೂದಲು ಒರಟಾಗುತ್ತದೆ. ತಾಮ್ರ ಬಣ್ಣ ಬದಲಿಸುತ್ತದೆ. ಕಬ್ಬಿಣದ ಅಂಶದಿಂದ ಕೂದಲು ಉದುರುತ್ತದೆ. ಜಿಡ್ಡು ಕೂದಲಿನವರು ಮತ್ತು ಸಿಕ್ಕಾಪಟ್ಟೆ ಬೆವರುವವರಿಗೂ ಮಳೆಗಾಲ ತೊಂದರೆ ತಂದೊಡ್ಡುತ್ತದೆ. ಜಿಡ್ಡು, ಬೆವರಿನಿಂದ ನೆತ್ತಿ ಮೇಲಿನ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ.
ಇಷ್ಟ್ ಮಾಡಿ
- ಮಳೆಯಲ್ಲಿ ನೆನೆದ ತಕ್ಷಣ ತಲೆ ಒರೆಸಿಕೊಳ್ಳುವುದು ಉತ್ತಮ.
- ಹುಡುಗರು ಮಳೆಗಾಲದಲ್ಲಿ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳುವುದು ಒಳಿತು.
- ಹುಡುಗಿಯರು ಗಟ್ಟಿಯಾಗಿ ಜಡೆ ಹೆಣೆಯದೆ ಸಡಿಲ ಬಿಡುವುದು ಸೂಕ್ತ.
- ವಾರಕ್ಕೊಮ್ಮೆಯಾದರೂ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
- ವಾರದಲ್ಲೆರಡು ಸಲವಾದರೂ ಶಾಂಪೂ ಬಳಸಿ. ಶಾಂಪೂ ಬಳಿಕ ನಿಂಬೆಹಣ್ಣಿನ ರಸದಿಂದ ತೊಳೆದುಕೊಂಡರೆ ಜಿಡ್ಡಿನಿಂದ ಪಾರಾಗಬಹುದು
- ಸಾಕಷ್ಟು ನೀರು ಕುಡಿಯಿರಿ.
- ಪೌಷ್ಟಿಕ ಆಹಾರ, ಹಣ್ಣು, ತರಕಾರಿ ಸೇವಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.