ಜನುಮ ದಿನ -ಪ್ರೇಮಚಂದ್
- 1880.
- ಹಿಂದಿ ಸಾಹಿತಿ. ಆಧುನಿಕ ಭಾರತೀಯ ಸಾಹಿತ್ಯದಲ್ಲಿ ಪ್ರಮುಖ ಹೆಸರು.
- ಮೂಲ ಹೆಸರು ಧನಪತ್ ರೈ ಶ್ರೀವಾತ್ಸವ. 'ನವಾಬ್ ರೈ' ಕಾವ್ಯನಾಮದಿಂದ ಕೆಲಕಾಲ ಸಾಹಿತ್ಯ ಕೃಷಿ. ಬಳಿಕ 'ಪ್ರೇಮ್ಚಂದ್' ಎಂದು ಬದಲಾವಣೆ.
- ವಿದೇಶಿ ಭಾಷೆಗಳಿಂದ ಹಿಂದಿಗೆ ಅನುವಾದಗಳನ್ನೂ ಮಾಡಿದ್ದಾರೆ.
ಪುಣ್ಯತಿಥಿ
ಮೊಹಮದ್ ರಫಿ
- 1924-1980.
- 35 ವರ್ಷಕ್ಕೂ ಹೆಚ್ಚು ಕಾಲ ಬಾಲಿವುಡ್ ಆಳಿದ ಶ್ರೇಷ್ಠ ಹಿನ್ನೆಲೆ ಗಾಯಕ.
- ಕನ್ನಡ, ಕೊಂಕಣಿ, ಮಲೆಯಾಳ, ಭೋಜಪುರಿ, ಓರಿಯಾ, ಸಿಂಧಿ, ಗುಜರಾತಿ, ಬೆಂಗಾಲಿ ಸಹಿತ ದೇಶದ ಭಾಷೆಗಳಲ್ಲದೆ ಇಂಗ್ಲೀಷ್, ಪರ್ಶಿಯನ್, ಸ್ಪ್ಯಾನಿಶ್, ಡಚ್ ಭಾಷೆಗಳಲ್ಲೂ ಹಾಡಿದ ಖ್ಯಾತಿ.
ದಿನಚರಿತೆ
- 1658- ಆರನೇ ಮೊಘಲ್ ಚಕ್ರವರ್ತಿಯಾಗಿ ಔರಂಗಜೇಬ್ ಸಿಂಹಾಸನಕ್ಕೆ.
- 1790- ಸಂಶೋಧಕ ಸ್ಯಾಮ್ಯುಯಲ್ ಹಾಪ್ಕಿನ್ಸ್ ಅವರು ಪೊಟಾಷ್ ಸಂಸ್ಕರಣೆ ಕುರಿತ ತಮ್ಮ ಸಂಶೋಧನೆಗೆ ಅಮೆರಿಕದ ಮೊದಲ ಹಕ್ಕುಸ್ವಾಮ್ಯ ಪಡೆದರು.
- 1865- ಜಗತ್ತಿನ ಮೊದಲ ನ್ಯಾರೋಗೇಜ್ ರೈಲು ಮಾರ್ಗ ಆಸ್ಟ್ರೇಲಿಯಾದಲ್ಲಿ ಕಾರ್ಯಾರಂಭ ಮಾಡಿತು.
ಟ್ವೀಟ್ಸ್ಟಾಲ್
ಒಬ್ಬ ವ್ಯಕ್ತಿಗೆ ಗನ್ ನೀಡಿದರೆ ಹೆಚ್ಚೆಂದರೆ ಆತ ಬ್ಯಾಂಕ್ ದರೋಡೆ ಮಾಡಬಹುದು. ಅದೇ ಒಬ್ಬ ವ್ಯಕ್ತಿಗೆ ಮತ ನೀಡಿದರೆ ಆತ ಇಡೀ ದೇಶವನ್ನೇ ಕೊಳ್ಳೆ ಹೊಡೆಯಬಲ್ಲ.
-ಮಾಹಿಕಾ ಶರ್ಮಾ