ಅಂತರಂಗದ 'ಬೆಳ್ಳಿಬೈಲು'
ಅಂತರಂಗ ತಂಡವು ಕಳೆದ ಮೂವತ್ತೆರಡು ವರ್ಷಗಳಿಂದ ಕ್ರಿಯಾಶೀಲ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ತಂಡವು 'ನೆಲೆ ಮುಂಬಯಿ, ಕಲೆ ಕರ್ನಾಟಕ' 'ರಂಗ ಬೆಸುಗೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮುಂಬಯಿನ ಅತ್ಯಂತ ಹಿರಿಯ ಮತ್ತು ಪ್ರಸಿದ್ಧ ಕನ್ನಡ ಸಾಂಸ್ಕೃತಿಕ ಸಂಸ್ಥೆ ಮೈಸೂರು ಅಸೋಸಿಯೇಷನ್ ಹಲವಾರು ವರ್ಷಗಳಿಂದ ಬೇರೆ ಊರುಗಳ ಸಂಘ-ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂಬೈನಲ್ಲಿ ಏರ್ಪಡಿಸುತ್ತ ಬಂದಿದೆ. ಈ ವರ್ಷದ ಕಾರ್ಯಕ್ರಮವನ್ನು ಜೂನ್ 3ರಂದು, ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಮುಂಬಯಿ ತಂಡದ 'ಬೆಳ್ಳಿಬೈಲು' ಕನ್ನಡ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ. ನಾಟಕ ಪ್ರವೇಶ ಉಚಿತ. ನಾಟಕದ ರಚನೆ ಮತ್ತು ನಿರ್ದೇಶನ ಡಾ. ಮಂಜುನಾಥ್ ಅವರದು.
ದಿನಾಂಕ: 3.6.2013
ಸ್ಥಳ: ಎಚ್.ಎನ್. ಕಲಾಕ್ಷೇತ್ರ
ಸಮಯ: ಸಂಜೆ 7.00ಕ್ಕೆ