ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾರ್ಯಸಾಧನೆಯ ಮಾರ್ಗಶೋಧಕ

Mainashree
Updated On : 3 Jun 2013, 12:52 pm

ನರೇಂದ್ರನ ವ್ಯಕ್ತಿತ್ವದ ವಿಶೇಷಗುಣವೆಂದರೆ ಆಪತ್ತಿಗೆ ಸಿಲುಕಿದವರ ಸಹಾಯಕ್ಕೆ ಮುನ್ನುಗ್ಗುವುದು. ಬಡ ಕುಟುಂಬದಿಂದ ಬಂದ ಕಾಲೇಜಿನ ಸಹಪಾಠಿಯಾದ ಹರಿದಾಸ ಚಟರ್ಜಿಯು ವರ್ಷವಿಡೀ ಕಾಲೇಜಿನ ಶುಲ್ಕವನ್ನೇ ಕಟ್ಟಿರಲಿಲ್ಲ. ಪರೀಕ್ಷೆ ಶುಲ್ಕವನ್ನು ಕಟ್ಟಲೂ ಶಕ್ತನಾಗಿರಲಿಲ್ಲ. ಶುಲ್ಕ ಕಟ್ಟದೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿರಲಿಲ್ಲ. ಆತನಿಗೆ ಸಹಾಯ ಮಾಡಲು ನರೇಂದ್ರ ಮುಂದಾದ.
ಗುಮಾಸ್ತರ ಬಳಿ ಬಂದ ನರೇಂದ್ರ, 'ಸರ್, ಹರಿದಾಸ ತುಂಬಾ ಬಡವ. ಆತನಿಂದ ಫೀಸ್ ಕಟ್ಟಲು ಸಾಧ್ಯವಿಲ್ಲ. ದಯಮಾಡಿ ವಿನಾಯಿತಿ ಕೊಡಿ. ಅವನು ತುಂಬಾ ಬುದ್ಧಿವಂತ ಹುಡುಗ. ಅವನ ಭವಿಷ್ಯ ಹಾಳಾಗಬಾರದು' ಎಂದು ಬೇಡಿಕೊಂಡ. ಗುಮಾಸ್ತರ ಮನಸ್ಸು ಕರಗಲೇ ಇಲ್ಲ. ನರೇಂದ್ರ ಇದಕ್ಕೊಂದು ಉಪಾಯ ಮಾಡಿದ. ಗುಮಾಸ್ತ ಅಫೀಮು ಸೇದುವುದನ್ನು ಪತ್ತೆಹಚ್ಚಿ, ಸಂಜೆ ಅಫೀಮು ಅಂಗಡಿಯಲ್ಲಿ ಕಾದುಕುಳಿತ. ಅಲ್ಲಿಗೆ ಬಂದ ಗುಮಾಸ್ತ ನರೇಂದ್ರನನ್ನು ನೋಡಿ ಪೆಚ್ಚಾದ. ಸಭ್ಯಸ್ತನಂತೆ ಕಾಲೇಜಿನಲ್ಲಿ ಪೋಸುಕೊಡುತ್ತಿದ್ದ ಗುಮಾಸ್ತ, ತನ್ನ ಬಣ್ಣವೆಲ್ಲಿ ಬಯಲಾಗುವುದೋ ಎಂದು ಹೆದರಿ ಹರಿದಾಸನಿಗೆ ಶುಲ್ಕ ವಿನಾಯಿತಿ ನೀಡುವುದಾಗಿಯೂ, ಪರೀಕ್ಷೆ ಶುಲ್ಕವನ್ನು ಮಾತ್ರ ಕಟ್ಟಲೇಬೇಕೆಂದು ತಿಳಿಸಿದ.
ನರೇಂದ್ರ ಗೆಳೆಯರಿಂದ ವಂತಿಕೆ ಸಂಗ್ರಹಿಸಿ ಹರಿದಾಸನ ಪರೀಕ್ಷಾ ಶುಲ್ಕವನ್ನು ಪಾವತಿಸಿದ. ಹೀಗೆ ನರೇಂದ್ರ ಒಂದು ಕೆಲಸವನ್ನು ಕೈಗೆತ್ತಿಕೊಂಡ ಎಂದರೆ ಅದನ್ನು ಸಾಧಿಸಿಯೇ ಸಿದ್ಧ.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement