ಪರಿಸರಸ
ವಿಶ್ವಬ್ಯಾಂಕ್ ಹೇಳಿದೆ: ಮುಂದಿನ 50 ವರ್ಷಗಳಲ್ಲಿ ಭೂಮಿಯ ಉಷ್ಣತೆ 4 ಡಿಗ್ರಿ ಸೆಲ್ಷಿಯಸ್ ಹೆಚ್ಚಾಗಲಿದೆಯಂತೆ. ಇದೇನು ಮಹಾ ಎನ್ನುಬೇಡಿ. ಅಷ್ಟು ಹೆಚ್ಚಾದರೆ, ಐಸುಗಳೆಲ್ಲಾ ಕರಗಿ ಒಂದಷ್ಟು ದ್ವೀಪ ದೇಶಗಳು ಮುಳುಗಿದಂತೆಯೇ. ಸುನಾಮಿ ಭಯವಂತೂ ಇದ್ದೇ ಇದೆ. ಈ ವರ್ಷ, ಜಾಗತಿಕ ಚರಿತ್ರೆಯಲ್ಲಿ ಅತ್ಯಧಿಕ ತಾಪಮಾನದ ವರ್ಷ ಎಂದು ದಾಖಲಾಗಿದೆ. 45 ದಶಲಕ್ಷ ವರ್ಷಗಳಲ್ಲೇ ಪ್ರಥಮ ಬಾರಿಗೆ, ವಾತಾವರಣದಲ್ಲಿ ಇಂಗಾಲದ ಡಯಾಕ್ಸೈಡ್ ಪ್ರಮಾಣ ದಾಖಲೆ ತಲುಪಿದೆ. ಕಳೆದ ಬಾರಿ ಕಾರ್ಬನ್ ಈ ಮಟ್ಟ ಮುಟ್ಟಿದಾಗ ಸಮುದ್ರದ ಮಟ್ಟ 40 ಮೀಟರ್ ಏರಿ ಕೋಲಾಹಲವಾಗಿತ್ತು. ಭೂಮಿಯ ತಾಪ ಹೆಚ್ಚುತ್ತಿದೆ, ಜೀವಿಗಳು ಒಂದೊಂದಾಗಿ ಅಳಿಯುತ್ತಿವೆ. ನಾವು ಮಾತ್ರ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಕುದುರೆಯಂತೆ ಪ್ರಪಾತದತ್ತ ದೌಡಾಯಿಸುತ್ತಲೇ ಇದ್ದೇವೆ. ಈ ಹಿನ್ನೆಲೆಯಲ್ಲಿ. ನಮ್ಮ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಚಿಂತಿಸುವಂತೆ ಪ್ರೇರೇಪಿಸಲು ವಿಶ್ವ ಪರಿಸರ ದಿನ ಬಂದಿದೆ. ಎಲ್ಲೆಡೆ, ಪರಿಸರದ ಕಾಳಜಿಯನ್ನು ಹಬ್ಬಿಸುವಂತಹ ಕಾರ್ಯಾಗಾರಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ಗುಬ್ಬಿಗಳನ್ನು ಉಳಿ ಸಲು ಜಾಥಾ, ಇತ್ಯಾಜ್ಯ ನಿವಾರಣೆಗೆ ಪ್ರೇರಣೆ, ವಿದ್ಯುತ್ ಬಳಕೆ ಇಳಿಕೆಗೆ ಒಲವು, ಪರಿಸರಸ್ನೇಹಿ ತಂತ್ರಜ್ಞಾನಗಳು ಮುಂತಾದವುಗಳ ಬಗ್ಗೆ ಚಿಂತನೆ ನಡೆಯುತ್ತದೆ. ನೀವೂ ಪಾಲ್ಗೊಳ್ಳಬಾರದೇಕೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.