ಗೊಂದಲದಲ್ಲಿದ್ದೇನೆ...
ನನ್ನ ಬೆಸ್ಟ್ ಫ್ರೆಂಡ್ ಒಬ್ಬಳು ಪ್ರಪೋಸ್ ಮಾಡಿದ್ಲು. 'ನಾವಿನ್ನೂ ಓದ್ತಾ ಇದ್ದೀವಿ. ಓದು ಮುಗಿದ ಮೇಲೆ ನೋಡೋಣ' ಅಂದೆ. ಆದರೆ ಫ್ರೆಂಡ್ಸ್ ಎಲ್ಲ, 'ಮುಂದೆ ಇಂಥಾ ಒಳ್ಳೆ ಹುಡುಗಿ ಸಿಗ್ತಾಳೆ ಅಂತ ಖಾತ್ರಿ ಏನು? ಒಪ್ಕೋಬೇಕಿತ್ತು. ಈಗಲಾದರೂ ಒಪ್ಕೊ' ಎನ್ನುತ್ತಿದ್ದಾರೆ. ಏನು ಮಾಡಬೇಕು? ಗೊಂದಲದಲ್ಲಿದ್ದೇನೆ.
- ಸಂದೇಶ ದೇವರಮನಿ
ನೀವು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿಯೇ ಇದೆ. ಮೊದಲು ಓದು ಮುಗಿಸಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುವುದು. ಆಮೇಲೆ ಉಳಿದದ್ದು. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಗೆಳೆಯರ ಮಾತನ್ನೇ ಇನ್ನೊಂದು ರೀತಿ ಯೋಚಿಸಿ. ಮುಂದೆ ಇವಳಿಗಿಂತ ಒಳ್ಳೆಯ, ಚೆಂದದ ಹುಡುಗಿ ಸಿಗುವ ಅವಕಾಶವೂ ಇದೆಯಲ್ಲವೆ?
-ಡಾ.ಸ್ಯಾಟಲೈಟ್