ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೇರೆ ಎಲ್ಲಿಯಾದರೂ ಹುಡುಕಿ!

Mainashree
Updated On : 5 Jun 2013, 1:03 am

ಅಜ್ಜ ಮತ್ತು ಅಜ್ಜಿ ಸಖತ್ ಜಗಳವಾಡಿಕೊಂಡ ಮೇಲೆ ಅಜ್ಜಿ ತನ್ನ ಗಂಡನೊಂದಿಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಳು.
ಮರುದಿನ ಅಜ್ಜ ತಮ್ಮ ಜಗಳದ ಎಲ್ಲ ವಿಷಯವನ್ನೂ ಮರೆತುಬಿಟ್ಟಿದ್ದ. ಆದರೆ ಅಜ್ಜಿ ಅವನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಳು ಮತ್ತು ಮಾತೇ ಆಡಲಿಲ್ಲ. ಅಜ್ಜ ಏನೆಲ್ಲ ಮಾಡಿದರೂ ಅಜ್ಜಿಯ ಮೌನವ್ರತವನ್ನು ಭಂಗ ಮಾಡದಾದ.
ಕೊನೆಗೆ ಅಜ್ಜ ದಡಬಡ ಮಾಡುತ್ತ ಮನೆಯ ಎಲ್ಲ ಕಪಾಟುಗಳನ್ನು ಮತ್ತು ಡ್ರಾಯರುಗಳನ್ನು ಶೋಧಿಸತೊಡಗಿದ. ಹೀಗೆಯೇ ಕೆಲವು ನಿಮಿಷಗಳು ಕಳೆಯುತ್ತಿದ್ದಂತೆ ಅಜ್ಜಿಗೆ ತಡೆಯಲಾಗಲಿಲ್ಲ. ಅವಳು ಕೋಪದಿಂದ ಕೇಳಿದಳು- 'ಅದೇನು ಕರ್ಮ ಹೀಗೆ ಹುಡುಕುತ್ತಿದ್ದಿ?'
'ದೇವರು ದೊಡ್ಡವನು. ನನಗೆ ಅದು ಸಿಕ್ಕಿತು'. ಅಜ್ಜ ತುಂಟ ನಗೆ ಬೀರುತ್ತ ಹೇಳಿದ, 'ನಿನ್ನ ಸ್ವರ'.
ನೀತಿ: ನೀವು ದೇವರನ್ನು ಹುಡುಕುತ್ತಿರುವಿರೆಂದಾದರೆ ಬೇರೆ ಎಲ್ಲಿಯಾದರೂ ಹುಡುಕಿ.

-ನಂದಿನಿ ಡಿ. ಕಾಮತ್
-ಮೂಲ: ಅಂತೋನಿ ಡಿಮೆಲ್ಲೊ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement