ಕುಂ. ವೀರಭದ್ರಪ್ಪ ಸಾಹಿತಿ
1. ನಿಮ್ಮ ಬರವಣಿಗೆ ಹಿಂದಿನ 'ಭದ್ರ' ಬುನಾದಿ ಯಾವುದು?
- 'ವೀರ' ರಸ.
2. 'ಗಾಂಧಿಕ್ಲಾಸು' ಬರೆದ ನಿಮ್ಮ ಪಾಲಿಗೆ 'ಬಾಲ್ಕನಿ' ಯಾವುದು?
- ದಲಿತರ ಕೇರಿ.
3. ನಿಮ್ಮ ಬದುಕಿನ 'ಅರಮನೆ'ಯಲ್ಲಿ 'ಭಳಾರೆ ವಿಚಿತ್ರಂ' ಎಂಬ ಸಂಗತಿ ಯಾವುದು?
- ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದ್ದು.