ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗುರುವಿನ ಪರಮ ದರ್ಶನ!

Mainashree
Updated On : 7 Jun 2013, 12:49 pm

ನರೇಂದ್ರನು ದಕ್ಷಿಣೇಶ್ವರದತ್ತ ಶ್ರೀ ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಲು ಹೊರಟ. ಅದೊಂದು ಅಪೂರ್ವ ಸಮ್ಮೇಳನ. ಅವನನ್ನು ಕಂಡ ರಾಮಕೃಷ್ಣರು 'ಕೋಲ್ಕತ್ತದಂತಹ ಭೋಗಭರಿತ ನಗರದಿಂದ ಇಂತಹ ಅಧ್ಯಾತ್ಮಶೀಲ ವ್ಯಕ್ತಿಯೊಬ್ಬ ಬರುತ್ತಿದ್ದಾನಲ್ಲ!' ಎಂದು ಆಶ್ಚರ್ಯಪಟ್ಟರು. ಅಲ್ಲಿ ನರೇಂದ್ರ ಬಂಗಾಳಿ ಹಾಡನ್ನು ಮಧುರವಾಗಿ ಹಾಡಿದ. ಹಾಡನ್ನು ಕೇಳುತ್ತಲೇ ರಾಮಕೃಷ್ಣರು ಸಮಾಧಿಸ್ಥರಾದರು. ಎಚ್ಚೆತ್ತ ಮೇಲೆ ನರೇಂದ್ರನ ಕೈ ಹಿಡಿದು ಕೋಣೆಗೆ ಕರೆದೊಯ್ದರು. ಇದು ನರೇಂದ್ರನಿಗೆ ವಿಚಿತ್ರವೆನಿಸಿತು. ಕೋಣೆಯಲ್ಲಿ ಅವನಿಗೆ ಮಿಠಾಯಿ, ಕಲ್ಲುಸಕ್ಕರೆ, ಬೆಣ್ಣೆಯನ್ನು ತಮ್ಮ ಕೈಯಾರೆ ತಿನ್ನಿಸಲು ಮುಂದಾದರು. ನರೇಂದ್ರ ಎಷ್ಟು ಬೇಡವೆಂದರೂ ಕೇಳದೆ ತಿನ್ನಿಸಿದರು. ಕೋಣೆಯಿಂದ ನರೇಂದ್ರನನ್ನು ಕರೆತಂದು, ಭಕ್ತರಿಗೆ ತೋರಿಸುತ್ತಾ, 'ನೋಡಿ ಇಲ್ಲಿ, ಇವನ ಮುಖದಲ್ಲಿ ಹೇಗೆ ಸರಸ್ವತಿ ಬೆಳಗುತ್ತಿದ್ದಾಳೆ' ಎಂದು ಉದ್ಗರಿಸಿದರು.
ನರೇಂದ್ರ 'ಮಹಾಶಯರೇ ನೀವು ದೇವರನ್ನು ಕಂಡಿದ್ದೀರಾ?' ರಾಮಕೃಷ್ಣರಿಗೆ ಪ್ರಶ್ನಿಸಿದ. ರಾಮಕೃಷ್ಣರು ಸ್ವಲ್ಪವೂ ಕಸಿವಿಸಿಗೊಳ್ಳದೆ, ತಬ್ಬಿಬ್ಬಾಗದೆ, ಮುಗುಳ್ನಗುತ್ತಲೇ ನೇರವಾಗಿ ಉತ್ತರವಿತ್ತರು, 'ಹೌದಪ್ಪ, ಕಂಡಿದ್ದೇನೆ, ಈಗ ನಿನ್ನನ್ನು ಕಾಣುತ್ತಿರುವಂತೆಯೇ, ಆದರೆ ಇನ್ನೂ ಹೆಚ್ಚು ಸ್ಪಷ್ಟವಾಗಿ ಕಂಡಿದ್ದೇನೆ!' ನರೇಂದ್ರ ಸ್ತಬ್ಧನಾಗಿ ಕುಳಿತ. ಈ ಉತ್ತರ ನರೇಂದ್ರನ ಮೇಲೆ ಗಾಢ ಪ್ರಭಾವ ಬೀರಿತು. 'ನಾನು ದೇವರನ್ನು ನೋಡಿದ್ದೇನೆ' ಎಂದು ಎದೆತಟ್ಟಿ ಹೇಳಬಲ್ಲ ವ್ಯಕ್ತಿಯನ್ನು ಅವನು ಜೀವನದಲ್ಲಿ ಇದೇ ಮೊದಲ ಸಲ ನೋಡುತ್ತಿದ್ದಾನೆ.

-ಆನಂದ ಎಸ್.ಎನ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement