ಘೋಷ್ ಕುರಿತು ಸಂವಾದ
ಕಳೆದ ಮೇ 30ರಂದು ನಿಧನರಾದ ಬೆಂಗಾಲಿ ಸಿನಿಮಾ ನಿರ್ದೇಶಕ-ನಿರ್ಮಾಪಕ ರಿತುಪರ್ಣೋ ಘೋಷ್ ಅವರ ಗೌರವಾರ್ಥ ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ಸಮೂಹವು ಗಿರೀಶ್ ಕಾಸರವಳ್ಳಿಯವರ ಜತೆ ರಿತುಪರ್ಣೋ ಘೋಷ್ ನಿರ್ದೇಶಿಸಿದ, ಪ್ರಶಸ್ತಿ ಪುರಸ್ಕೃತ ಎರಡು ಬೆಂಗಾಲಿ ಸಿನಿಮಾ ಕುರಿತು ಚರ್ಚೆಯನ್ನು ಇದೇ ತಿಂಗಳ 8 ಮತ್ತು 9ರಂದು ಏರ್ಪಡಿಸಿದೆ.
ಜೂನ್ 8 ರಂದು ಸಂಜೆ 6 ಗಂಟೆಗೆ 'ಉನಿಶೆ ಏಪ್ರಿಲ್' ಮತ್ತು ಜೂನ್ 9 ರಂದು ಸಂಜೆ 4 ಗಂಟೆಗೆ 'ದಹನ್'ಗಳ ಕುರಿತು ಚರ್ಚೆ ನಡೆಯಲಿದೆ. ಈ ಎರಡೂ ಚಿತ್ರಗಳ ನಿರ್ದೇಶನ, ನಿರ್ಮಾಣ, ಚಿತ್ರಕಥೆ ರಿತುಪರ್ಣೋ ಘೋಷ್ ಅವರದ್ದು.
ಹೆಚ್ಚಿನ ಮಾಹಿತಿಗಾಗಿ ಗೋಪಿನಾಥ್ ಬಿ.ಆರ್ ಅವರನ್ನು ಮೊ: 9964152999 ಮೂಲಕ ಸಂಪರ್ಕಿಸಬಹುದು.
ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ನಂ. 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ 1ನೇ ಹಂತ, (ದಯಾನಂದ ಕಾಲೇಜ್ ಸಮೀಪ, 'ವಸುಧಾ ಭವನ'ದ ಎದುರು), ಬೆಂಗಳೂರು-560 078.
ಹುತ್ತದಲ್ಲಿ ಹುತ್ತ
ಅಂತರಂಗ ತಂಡ ಜೂನ್ 9 (ಭಾನುವಾರ) ಸಂಜೆ 7 ಗಂಟೆಗೆ ಕೆ.ಎಚ್. ಕಲಾಸೌಧದಲ್ಲಿ ಕೈಲಾಸಂ ನಾಟಕ 'ಹುತ್ತದಲ್ಲಿ ಹುತ್ತ' ಪ್ರದರ್ಶಿಸಲಿದೆ. ಮಾಹಿತಿಗೆ ಅಂಕಲ್ ಶ್ಯಾಂ ಅವರನ್ನು (ಮೊ: 9880914509) ಸಂಪರ್ಕಿಸಬಹುದು.
ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ.
ಸಮಯ: ಸಂಜೆ 7 ಗಂಟೆ.