ಹೇಳಿಕೊಳ್ಳಲು ಭಯ...
ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಈಗ ನನಗೊಂದು ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಓದಿದ್ದು ತಲೆಗೇ ಹೋಗುತ್ತಿಲ್ಲ. ಪಾಲಕರ ಬಳಿ ಹೇಳಿಕೊಳ್ಳಲು ಭಯ. ಏನು ಮಾಡಲಿ?
- ಟಿ.ವಿನಯ್
ಮರಿ, ಇದು ನಿನ್ನೊಬ್ಬನ ಸಮಸ್ಯೆ ಅಲ್ಲ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಗೆ ಕಾಲಿಡುವ ಅನೇಕರ ಸಮಸ್ಯೆ. ಅದುವರೆಗೆ ಇಲ್ಲದ ಈ ತೊಂದರೆ ಇಂಥ ಕಾಲದಲ್ಲೇ ಹುಟ್ಟಿಕೊಳ್ಳುವುದೇಕೆ? ಚೆನ್ನಾಗಿ ಓದಬೇಕು, ಜಾಸ್ತಿ ಸ್ಕೋರ್ ಮಾಡಬೇಕು ಎನ್ನುವ ಒತ್ತಡ ಇದ್ದಕ್ಕಿದ್ದಂತೆ ಶುರುವಾಗಿಬಿಡುತ್ತದೆ. ಅದಕ್ಕೆ ಸರಿಯಾಗಿ ಪಾಲಕರೂ ಒತ್ತಡ ಹೇರಲಾರಂಭಿಸುತ್ತಾರೆ. ಪರಿಹಾರವೆಂದರೆ ನೀವು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪರೀಕ್ಷೆ ಹತ್ತಿರ ಬಂದಾಗ ಅಭ್ಯಾಸ ಆರಂಭಿಸುವ ಬದಲು ಈಗಿನಿಂದಲೇ ದಿನದ ಪಾಠವನ್ನು ಅಂದಂದೇ ಮನನ ಮಾಡಿಕೊಳ್ಳಬೇಕು. ಇದನ್ನು ರೂಢಿಸಿಕೊಂಡರೆ ಯಾವ ತೊಂದರೆಯೂ ಇರುವುದಿಲ್ಲ.
-ಡಾ.ಸ್ಯಾಟಲೈಟ್