boyರುಚಿ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್ ರ್ಯಾಲಿ ಮಾಡೋದನ್ನು ನೋಡಿದ್ದೀರಿ. ಕಣ್ಮುಚ್ಚಿ ನಡೆಯುವುದನ್ನೂ ನೋಡಿದ್ದೀರಿ. ಕಡಾಯಿಯಲ್ಲಿ ಕುದಿಯುವ ಎಣ್ಣೆಯ ಮುಂದೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಜ್ಜಿ ಬೋಂಡಾ ಮಾಡುವ, ಫಾಸ್ಟ್ಪುಡ್ ತಯಾರಿಸುವುದನ್ನು ನೋಡಿದ್ದೀರಾ?
ಇಲ್ಲೊಬ್ಬ ಯುವಕನಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಕರಾವಳಿ ಫಾಸ್ಟ್ಪುಡ್ ಹೋಟೆಲ್ನ ಮಾಲಿಕರ ಮಗ ಸಂದೇಶ. 19 ವರ್ಷದ ಈತ, ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಣ್ಮುಚ್ಚಿಕೊಂಡು ನಿಮಿಷಾರ್ಧದಲ್ಲಿ ರುಚಿಕಟ್ಟಾದ ಅಡುಗೆ ಮಾಡುತ್ತಾನೆ.
ಘೀ ರೈಸ್, ಮಸಾಲಾ ರೈಸ್, ಜೀರಾ ರೈಸ್, ಗೋಬಿ ಮಂಚೂರಿ ಸೇರಿದಂತೆ ಅನೇಕ ಬಗೆಯ ತಿಂಡಿ ತಿನಿಸುಗಳನ್ನು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಕಚಕನೆ ಮಾಡುತ್ತಾನೆ. ಇದಕ್ಕೆ ಬೇಕಾದ ಈರುಳ್ಳಿ, ಮೆಣಸಿನಕಾಯಿ, ಟೊಮೇಟೊಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಹೆಚ್ಚಿಕೊಳ್ಳುತ್ತಾನೆ.
ಮೂಲತಃ ಉಡುಪಿ ಜಿಲ್ಲೆಯ ಈತನ ತಂದೆ-ತಾಯಿ ಹೋಟೆಲ್ ಉದ್ಯಮಿಗಳು. ದ್ವಿತೀಯ ಪಿಯುಸಿ ವಿದ್ಯಾರ್ಥಿ, ಬಿಡುವಿದ್ದಾಗ ಹೋಟೆಲ್ನಲ್ಲಿ ಅಡುಗೆ ಭಟ್ಟ. ಯಾವುದಾದರೂ ವಿಶೇಷ ಕಲೆ ಕಲಿತುಕೊಳ್ಳಬೇಕು ಎಂಬ ಮಹದಾಸೆ. ಮೂರು ವರ್ಷಗಳ ಸತತ ಪ್ರಯತ್ನದಿಂದ ಈ ಸಿದ್ಧಿ.
- ದತ್ತು ಕಮ್ಮಾರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.