ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮತ್ತೆ ಬಂದಿದ್ದಾನೆ....

Mainashree
Updated On : 9 Jun 2013, 3:13 am

ಒಬ್ಬನನ್ನು ಪ್ರೀತಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಅವನ ಮನೆಯವರು ಅವನಿಗೆ ಮದುವೆ ಮಾಡಿದರು. ಈಗ 'ನನಗೆ ನೀನೇ ಬೇಕು. ಅವಳೊಂದಿಗೆ ಬಾಳಲು ಇಷ್ಟವಿಲ್ಲ. ನಿನ್ನನ್ನು ಮರೆಯಲು ಆಗುತ್ತಿಲ್ಲ' ಎಂದು ಮತ್ತೆ ನನ್ನ ಬೆನ್ನು ಬಿದ್ದಿದ್ದಾನೆ. ಆ ಹುಡುಗಿಗೆ ಮೋಸ ಮಾಡಲು ಇಷ್ಟವಿಲ್ಲ. ಏನು ಮಾಡಲಿ?
- ಸರ್ವಮಂಗಳಾ, ಊರು ಬೇಡ
ಖುಷಿಪಡಿ, ಬೂಟಾಟಿಕೆ ಮಾಡುವವನನ್ನು ಕಟ್ಟಿಕೊಳ್ಳುವುದು ತಪ್ಪಿತಲ್ಲ ಎಂದು! ನಿಮ್ಮನ್ನು ಬಿಟ್ಟಿರಲು ಸಾಧ್ಯವಿಲ್ಲದಷ್ಟು ಪ್ರೀತಿ ಇದ್ದರೆ ಎರಡು ವರ್ಷಗಳ ಹಿಂದೆಯೇ ಮನೆಯವರ ಬಳಿ ಧೈರ್ಯದಿಂದ ಹೇಳಬೇಕಿತ್ತು ಅಥವಾ ಅವರ ವಿರೋಧವಿದ್ದರೆ ಅದನ್ನು ಲೆಕ್ಕಿಸದೇ ನಿಮ್ಮ ಕೈ ಹಿಡಿಯಬೇಕಿತ್ತು ಅಲ್ಲವೆ? ಎರಡು ವರ್ಷ ಹೆಂಡತಿಯಿಂದ ಸುಖ ಅನುಭವಿಸಿ ಈಗ ಮತ್ತೆ ನಿಮ್ಮ ಹಿಂದೆ ಬಿದ್ದಿದ್ದಾನೆ. ಹೇಗಿದ್ದರೂ ಅವನನ್ನು ಮರೆತಿದ್ದೀರಿ. ಮತ್ತೆ ನಿಮ್ಮ ಬಾಳಿನಲ್ಲಿ ಪ್ರವೇಶಿಸಲು ಅವಕಾಶ ಕೊಡಬೇಡಿ.

ಡಾ.ಸ್ಯಾಟಲೈಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement