ಸದವಕಾಶ!
ಸಂಕುಲ ಸಿನಿಮಾ ತರಬೇತಿ ಸಂಸ್ಥೆಯು ಆರು ತಿಂಗಳ ಸಿನಿಮಾ ತರಬೇತಿ ಕೋರ್ಸ್ ನಡೆಸುತ್ತಿದೆ. ಈ ಕೋರ್ಸ್ನಲ್ಲಿ ಸಿನಿಮಾ ಅಭಿನಯ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ಎಡಿಟಿಂಗ್ ಮತ್ತು 3ಡಿ ಎನಿಮೇಷನ್, ಡಬ್ಬಿಂಗ್, ಹಿನ್ನೆಲೆ ಗಾಯನ, ವಿನ್ಯಾಸ, ಪ್ರಸಾದನ ಹಾಗೂ ಸಂಗೀತ ನಿರ್ದೇಶನಗಳು ಸೇರಿವೆ. ಈ ತರಬೇತಿ ಕಾರ್ಯಕ್ರಮದಲ್ಲಿ ಯಾವುದೇ ಭಾಷೆಯ ಅಭ್ಯರ್ಥಿ ಭಾಗವಹಿಸಬಹುದು. ಪ್ರತಿ ವಿಭಾಗಕ್ಕೆ ಒಬ್ಬರಿಗೆ ಮಾತ್ರ ಅವಕಾಶ. ತರಬೇತಿ ಸಂದರ್ಭದಲ್ಲಿ ಕ್ಯಾಮರಾ(ಮಲ್ಟಿ ಲೆನ್ಸ್), ಎಡಿಟಿಂಗ್-ಡಬ್ಬಿಂಗ್ ಸ್ಟುಡಿಯೊ, ಮಿನಿ ಸಿನಿಮಾ ಹಾಲ್ನ ಒದಗಿಸಲಾಗುವುದು.
ಸಂಕುಲ ಫಿಲ್ಮ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮುಂದಿನ ಮೂರನೇ ತಲೆಮಾರಿನವರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆಯಾ ವಿಭಾಗದ ಪರಿಣತರಿಂದ ತರಬೇತಿ ನೀಡಲಾಗುತ್ತದೆ. ಈಗಾಗಲೇ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಗೆ ಸಂಸ್ಥೆಯದು.
ನೋಂದಣಿಗೆ ಕೊನೆಯ ದಿನಾಂಕ 15, ಜೂನ್ 2013. ವಿವರಗಳಿಗೆ ಸಂಪರ್ಕಿಸಿ- ಅಶೋಕ್ ಕಿತ್ತೂರ್ (9243422349, sankulatheatremirror@gmail.com, www.sankulatheatremirror.com.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.