ಈರುಳ್ಳಿ ಪರ್ವ
ಈ ಆಮೆಯನ್ನು ನೀವು ಹಸಿಹಸಿಯಾಗಿಯೇ ತಿನ್ನಬಹುದು. ಈ ಜೇಡಗಳನ್ನೂ ಅಷ್ಟೆ, ಹಾಗೇ ತಿನ್ನಲಿಷ್ಟವಿಲ್ಲದಿದ್ದರೆ ಸೌತೆಕಾಯಿ ಜತೆ ಸೇರಿಸಿ ರಾಯತ ಮಾಡಿಕೊಳ್ಳಿ. ಈ ಮಕ್ಕಳನ್ನೂ ಬಿಡಬೇಡಿ ಮತ್ತೆ. ಹೆಚ್ಚೇನಾಗಲ್ಲ, ಹೆಚ್ಚೆಂದರೆ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಹುದಷ್ಟೇ! ಗಾಬರಿಯಾಗಬೇಡಿ, ಇವೆಲ್ಲಾ ಈರುಳ್ಳಿ ಕಲಾಕೃತಿಗಳು. ಈರುಳ್ಳಿ, ನೀರುಳ್ಳಿ, ಉಳ್ಳಾಗಡ್ಡಿ ಹೀಗೆ ಕನ್ನಡದಲ್ಲಿ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಆನಿಯನ್ಗೆ ಟೊಮೆಟೋ ಹಬ್ಬದ ಥರವೇ ಹಬ್ಬವೊಂದು ಇತ್ತೀಚೆಗೆ ನಡೆಯಿತು. ನಡೆದದ್ದು ಟೆಕ್ಸಾಸ್ನ ವೆಲಾಸ್ಕೊ ಸಿಟಿ ಪಾರ್ಕ್ನಲ್ಲಿ. ವಿಭಿನ್ನವಾಗಿ ನಡೆದ ಹಬ್ಬದ ಉದ್ದೇಶ- ಈರುಳ್ಳಿಯ ಮಹತ್ವ ಸಾರುವುದು. ಈರುಳ್ಳಿಯನ್ನು ಬಳಸಿಕೊಂಡು ತಯಾರಿಸಿದ ಆಮೆ, ಇರುವೆ, ಬೆಕ್ಕು, ಮಕ್ಕಳು ಮುಂತಾದ ಕಲಾತ್ಮಕ ಬೊಂಬೆಗಳು ಪ್ರದರ್ಶನಗೊಂಡು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಜೊತೆಗೆ ಈರುಳ್ಳಿ ತಿನ್ನುವ ಸ್ಪರ್ಧೆಗಳೂ ಜರುಗಿದವು. ಈರುಳ್ಳಿಯ ಪ್ರಯೋಜನಗಳನ್ನು ವಿವರಿಸುವ ಗೋಷ್ಠಿಗಳು ಕೂಡ ಆಯೋಜಿಸಲ್ಪಟ್ಟಿದ್ದವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.