ಗುರುತಿನ ಮೇಲೆ ಊಹೆ
ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗುವ ಹೆಜ್ಜೆಗುರುತುಗಳನ್ನು ನೋಡಿದಾಗ ಆತ ನಡೆದುಕೊಂಡು ಹೋಗಿದ್ದಾನೆಯೇ, ಓಡಿ ಹೋಗಿದ್ದಾನೆಯೇ, ಹಿಮ್ಮುಖವಾಗಿ ನಡೆದುಹೋಗಿದ್ದಾನೆಯೇ, ಆತ ಎತ್ತರದ ವ್ಯಕ್ತಿಯೇ, ಗಿಡ್ಡವಾಗಿದ್ದಾನೆಯೇ, ಮಹಿಳೆಯೋ ಅಥವಾ ಪುರುಷನೋ ಎಂಬುದನ್ನು ಊಹಿಸಬಹುದು.
ಕೆಲವೊಮ್ಮೆ ಘಟನೆ ನಡೆದ ಸ್ಥಳದಲ್ಲಿ ಹೆಜ್ಜೆಗುರುತುಗಳು ಅರ್ಧ, ಒಂದೆರಡು ಬೆರಳುಗಳ ಅಚ್ಚು ಬಿದ್ದಿರುತ್ತವೆ. ಹಿಮ್ಮಡಿ, ಬೆರಳಿಲ್ಲದೆ ಕೇವಲ ಪಾದದ ಗುರುತು ಇರುತ್ತವೆ. ಅಂಥ ಹೆಜ್ಜೆಗುರುತುಗಳನ್ನೂ ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಅದನ್ನು ಆಧರಿಸಿ ಆರೋಪಿ ಪತ್ತೆ ಕಷ್ಟ ಎನ್ನುತ್ತಾರೆ ಪೊಲೀಸರು.
ನಶಿಸುವ ಹಾಗೂ ನಶಿಸದ ಹೆಜ್ಜೆಗುರುತು ಎಂಬ ವಿಧಗಳಿವೆ. ಸಾರ್ವಜನಿಕ ಸ್ಥಳದಲ್ಲಿ, ಮನೆಗಳಲ್ಲಿ ಬೀಳುವ ಹೆಜ್ಜೆಗುರುತುಗಳು ಬೇಗ ನಶಿಸುತ್ತವೆ. ಕಾಡುಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ಬೀಳುವ ಹೆಜ್ಜೆಗುರುತುಗಳು ಬೇಗ ನಶಿಸುವುದಿಲ್ಲ. ಕೆಲವೊಮ್ಮೆ ಗಾಳಿ ಹಾಗೂ ಮಳೆ ಬಂದಲ್ಲಿ ಅಂತಹ ಸ್ಥಳದ ಹೆಜ್ಜೆ ಗುರುತುಗಳು ನಾಶವಾಗುತ್ತವೆ. ಹೆಜ್ಜೆಗುರುತು ಹಾಗೂ ಅಲ್ಲಿನ ಸ್ಥಳ ಆಧರಿಸಿ ಪೊಲೀಸರು ಆ ಗುರುತುಗಳನ್ನು ಸಂಗ್ರಹಿಸುತ್ತಾರೆ.
- ಶಾಂತ ತಮ್ಮಯ್ಯ