ಆ ದಿನಗಳು ನಿಷಿದ್ಧವೆ?
ಮುಟ್ಟಿನ ದಿನಗಳಲ್ಲಿ ಗಂಡ-ಹೆಂಡತಿ ಕೂಡುವುದು ತಪ್ಪೇ? ಒಂದೊಮ್ಮೆ ಸೇರಿದರೆ ತೊಂದರೆ ಇದೆಯೆ?
- ಚಂದ್ರು, ಗೋಕಾಕ
ಹೆಣ್ಣು ಋತುಮತಿಯಾದಾಗ ಸಂಭೋಗ ಕೂಡದೆಂದು ವೈದ್ಯಕೀಯ ಶಾಸ್ತ್ರದಲ್ಲೇನೂ ಇಲ್ಲ. ಪರಸ್ಪರ ಒಪ್ಪಿಗೆ ಇದ್ದರೆ ಯಾವ ದಿನದಲ್ಲಾದರೂ ಸೇರಬಹುದು. ಮುಟ್ಟಿನ ದಿನಗಳಲ್ಲಿ ಹೆಣ್ಣಿಗೆ ಸುಸ್ತು, ಹೊಟ್ಟೆನೋವು ಇರುತ್ತದೆ. ಅಧಿಕ ವಿಶ್ರಾಂತಿ ಬೇಕೆನಿಸುತ್ತದೆ. ರಕ್ತಸ್ರಾವವೂ ಇರುತ್ತದೆ.ಕೂಡಿದಾಗ ಹೆಣ್ಣಿಗೆ ಸೋಂಕು ತಗಲುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಆ ದಿನಗಳಲ್ಲಿ ಮಿಲನ ಕೂಡದು ಎನ್ನುವ ಶಾಸ್ತ್ರವನ್ನು ನಮ್ಮ ಹಿರಿಯರು ಮಾಡಿದ್ದಾರೆ.
-ಡಾ. ಸ್ಯಾಟಲೈಟ್
anekaby2@gmail.com