ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಟಕೋತ್ಸವ ರಂಗಬೆಡಗು

Vishwanath S
Updated On : 12 Jun 2013, 1:24 am

'ಭಾಗವತರು' ಸಂಘಟನೆ ತನ್ನ 13ನೇ ವರ್ಷದ ನಾಟಕೋತ್ಸವ 'ರಂಗಬೆಡಗು' ಆಯೋಜಿಸಿದೆ. ಕೆ.ವೈ. ನಾರಾಯಣಸ್ವಾಮಿಯವರ 5 ನಾಟಕಗಳ ಉತ್ಸವ ಇದಾಗಿದೆ. 2013, ಜೂನ್ 15ರಿಂದ 19ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಐದು ಬೇರೆ ಬೇರೆ ತಂಡಗಳಿಂದ, ಐದು ವಿಭಿನ್ನ ನಾಟಕಗಳ ಪ್ರದರ್ಶನವಿದೆ. 15ರಂದು ರೂಪಾಂತರ ರಂಗತಂಡದ, ಕೆ.ಎಸ್.ಡಿ.ಎಲ್. ಚಂದ್ರು ನಿದೇರ್ಶನದ 'ಚಕ್ರರತ್ನ', 16ರಂದು ಶಿವಮೊಗ್ಗದ ರಂಗಬೆಳಕು ತಂಡದ, ಈಶ ಎಂ.ಸಿ. ಹಳ್ಳಿ ನಿರ್ದೇಶಿಸಿದ 'ಕೈವಾರ ನಾರೇಯಣ', 17ರಂದು ರಂಗನಿರಂತರ ತಂಡದ 'ಮಳೆ ಮಾಂತ್ರಿಕ' ನಾಟಕ. ಇದರ ನಿರ್ದೇಶನ ಬಿ.ಜಿ. ರಾಮಕೃಷ್ಣ ಅವರದು. 18ರಂದು ಬೆಂಗಳೂರಿನ ಸಮುದಾಯ ತಂಡದಿಂದ 'ಪಂಪ ಭಾರತ', ನಿದೇರ್ಶನ ಪ್ರಮೋದ್ ಶಿಗ್ಗಾಂವ್ ಹಾಗೂ 19ರಂದು ಪ್ರಕಾಶ್ ಪಿ. ಶೆಟ್ಟಿ ನಿರ್ದೇಶನದ 'ಅನಭಿಜ್ಞ ಶಾಕುಂತಲ' ನಾಟಕ ಪ್ರದರ್ಶನಗೊಳ್ಳಲಿದೆ.
ಅಲ್ಲದೇ ರಂಗಗೀತೆಗಳು ಹಾಗೂ ಕೆವೈಎನ್ ನಾಟಕಗಳ ಕೃತಿಗಳ ಬಗ್ಗೆ ವಿಚಾರ ಸಂಕಿರಣ, ಡಾ. ಕೆ.ವೈ. ನಾರಾಯಣಸ್ವಾಮಿ ಅವರಿಗೆ ರಂಗಗೌರವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ದಿನಾಂಕ: 15ರಿಂದ 19 ಜೂನ್, 2013
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಸಮಯ: ಪ್ರತಿದಿನ ಸಂಜೆ 7ಕ್ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement