ಎಂಥಾ ಸೈಕಲ್!
ಒಂದು ಸಾಧಾರಣ ಸೈಕಲ್ ಬೆಲೆ ಎಷ್ಟಿರಬಹುದು? 5ರಿಂದ 10, ಹೆಚ್ಚೆಂದರೆ 15 ಸಾವಿರ ತಾನೆ? ಇಲ್ಲೊಂದು ಸೈಕಲಿದೆ ನೋಡಿ, ಬೆಲೆ ಬರೋಬ್ಬರಿ ರು. 56 ಸಾವಿರ.
ಮಂಗಳೂರಿನ ನೆಹರೂ ಮೈದಾನದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಆಟೋ ಎಕ್ಸ್‌ಪೋ ಮೇಳದಲ್ಲಿ ಕಂಡುಬಂದ ಸೈಕಲ್ ಇದು. ಅಂಥದ್ದೇನಿದೆ ಇದರಲ್ಲಿ ಅಂತೀರಾ?
ಮಿನಿ ಕಂಪನಿ ತಯಾರಿಸಿರುವ ಈ ಸೈಕಲನ್ನು ಮೂರು ಭಾಗ ಮಾಡಿ ಮಡಚಿಡಬಹುದು. ಹ್ಯಾಂಡಲ್ ತೆಗೆದು, ಮೊದಲ ಮತ್ತು ಎರಡನೇ ಚಕ್ರವನ್ನು ಆರಾಮವಾಗಿ ಮಡಚಿ ಕ್ಯಾರಿಬ್ಯಾಗಿನಲ್ಲಿ ತುಂಬಿ ಕೊಂಡೊಯ್ಯಬಹುದು. ಹಗುರವಾಗಿದ್ದು ಸುಲಭವಾಗಿ ಸಾಗಿಸಬಹುದು. ಸೈಕಲ್‌ನ ರಾಡ್‌ಗಳ ಮೇಲ್ಭಾಗಕ್ಕೆ ಅಲ್ಯುಮಿನಿಯಂ ಮಿಶ್ರ ಲೋಹದ ಕವಚ. ಬೇಕಾದ ಎತ್ತರಕ್ಕೆ ಏರಿಸಬಹುದಾದ ಸಿಂಗಲ್ ಸೀಟು. ಟ್ಯೂಬ್‌ಲೆಸ್ ಟಯರ್. ಟ್ರೆಕ್ಕಿಂಗ್‌ಗೆ ಆರಾಮವಾಗಿ ಬಳಸಬಹುದು.
-ವಜ್ರಾಕ್ಷಿ ಬಂಟ್ವಾಳ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.