ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೂದಲೂ ಸಾಕ್ಷ್ಯ ಹೇಳುತ್ತದೆ!

Lingaraj Badiger
Updated On : 14 Jun 2013, 4:04 am

ಆರೋಪಿ ಕೂದಲೆಳೆಯಲ್ಲಿ ಪಾರಾಗಿದ್ದಾನೆ ಎಂಬ ಮಾತನ್ನು ಕೇಳಿದ್ದೀರಿ. ಆದರೆ ಆ 'ಕೂದಲು' ಸಹ ಆರೋಪಿ ಪತ್ತೆ ಮಾಡುವಲ್ಲಿ ಕೆಲವೊಮ್ಮೆ ಪಾತ್ರ ವಹಿಸುತ್ತದೆ. ಆಗ ಈ ಕೂದಲೆಳೆಯಲ್ಲಿ ಪಾರಾದ ಎಂಬ ಮಾತು ಅನ್ವಯವಾಗುವುದಿಲ್ಲ.

ಸಾಮಾನ್ಯವಾಗಿ ಕೊಲೆ, ಜಗಳ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ಕೂದಲುಗಳು ಪತ್ತೆಯಾಗುತ್ತವೆ. ಸುಲಿಗೆ ದರೋಡೆ, ಕಳ್ಳತನ, ಅಪಘಾತದಂತಹ ಪ್ರಕರಣಗಳಲ್ಲಿ ಕೂದಲು ಪತ್ತೆಯಾಗುವ ಸಾಧ್ಯತೆ ಕಡಿಮೆ.

ಬಟ್ಟೆ ಹಾಗೂ ದೇಹದ ಮೇಲೆ ಕೂದಲು ಕಾಣಸಿಗುತ್ತವೆ. ಹೆಜ್ಜೆಗುರುತು, ಬೆರಳಚ್ಚು ಪತ್ತೆ ಮಾಡುವಂತೆ ಅಪರಾಧ ನಡೆದ ಸ್ಥಳದಲ್ಲಿ ಕೂದಲು ಇರುವ ಬಗ್ಗೆಯೂ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಕೂದಲು ಪತ್ತೆಯಾದಲ್ಲಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ.

ಬರಿಗಣ್ಣಿನಿಂದ ನೋಡಿದಲ್ಲಿ ಕೂದಲು ಕಾಣುವುದಿಲ್ಲ. ಹಾಗಾಗಿ ಲೆನ್ಸ್ ಹಾಕಿ ಕೂದಲು ಹುಡುಕುತ್ತಾರೆ. ಒಂದು ವೇಳೆ ಕೂದಲು ಸಿಕ್ಕಿದಲ್ಲಿ ಅದನ್ನು ಮೈಕ್ರೋಸ್ಕೋಪ್‌ನಿಂದ ಪರಿಶೀಲಿಸುತ್ತಾರೆ. ಇದರಿಂದ ಆ ಕೂದಲು ಮಹಿಳೆ ಅಥವಾ ಪುರುಷರದ್ದೇ ಎಂಬುದನ್ನು ತಿಳಿಯಬಹುದು. ಅಲ್ಲದೆ ಡಿಎನ್‌ಎ ಪರೀಕ್ಷೆ ಕೂಡ ಮಾಡಬಹುದು.
ಪರೀಕ್ಷೆ ನಂತರ ಪೊಲೀಸರು ಶಂಕಿತರ ಕೂದಲನ್ನು ಪರೀಕ್ಷೆಗೆ ಕಳುಹಿಸಿದಲ್ಲಿ, ಎರಡೂ ವರದಿಗಳು ಒಂದೇ ಆದಲ್ಲಿ ಯಾರು ಆ ಕೃತ್ಯವೆಸಗಿದ್ದಾರೆ ಎಂಬುದು ಖಚಿತವಾಗುತ್ತದೆ. ಹಾಗಾಗಿ ಕೂದಲನ್ನು ಸಹ ಒಂದು ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement