ನಿವೃತ್ತಿ
ನಿವೃತ್ತಿ ವೃತ್ತಿಗೆ ಮಾತ್ರ ಸಂಬಂಧಿಸಿದ್ದು, ಪ್ರವೃತ್ತಿಗೆಂದೂ ನಿವೃತ್ತಿ ಇಲ್ಲ!
- ಸರೋಜಿನಿ ಹಾದಿಮನಿ, ಧಾರವಾಡ
ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಮಾಡುವುದು ಬಹುಶಃ ನಿವೃತ್ತಿಯ ನಂತರವೇ!
- ಕುಸುಮಾ ಸರ್ದೇಸಾಯಿ, ಹುಬ್ಬಳ್ಳಿ
ನಿವೃತ್ತಿಯೇ ಇಲ್ಲದ ಏಕೈಕ ಸರಕಾರಿ ಕೆಲಸವೆಂದರೆ ಶಾಸಕ, ಮಂತ್ರಿಗಿರಿ. ಜೀವನದ ಅಂತ್ಯದವರೆಗೂ ಮಾಡಬಹುದಾದ ಕೆಲಸ ಇದು!
- ದೀಪಂಕರ ಶೆಟ್ಟಿ, ಮಂಡ್ಯ
ರಾಜಕಾರಣಿಗಳು 'ನಿವೃತ್ತಿ' ಬಗ್ಗೆ ಮಾತನಾಡುವುದು 'ಸ್ಮಶಾನ ವೈರಾಗ್ಯ'ದಂತೆ ಸೋತ ಸಂದರ್ಭದ ತಾತ್ಕಾಲಿಕ ಮಾತುಗಳು!
- ಸವಿತಾ ಶಂಕರ್, ಬೆಂಗಳೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.