ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮರೆಸುವುದು ಹೇಗೆ?

Lingaraj Badiger
Updated On : 14 Jun 2013, 4:10 am

ನನ್ನ ಸ್ನೇಹಿತೆಗೆ ಒಬ್ಬಾತ ಹೈಸ್ಕೂಲ್ ದಿನಗಳಿಂದಲೂ ಬೆನ್ನು ಬಿದ್ದಿದ್ದ. ಪಿಯುಸಿಗೆ ಅವಳು ಸೇರಿದ ಕಾಲೇಜಿಗೇ ಸೇರಿದ. ಈಗ ಇಬ್ಬರೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ ಮತ್ತು ಆತನ ಪ್ರಪೋಸಲ್ ಅನ್ನು ಅವಳು ಒಪ್ಪಿಕೊಂಡಿದ್ದಾಳೆ. ಪಿಯುಸಿಯಲ್ಲಿ ಆತನಿಗೆ ಅವಳಿಂದ ಆದ ಅವಮಾನ ಅಷ್ಟಿಷ್ಟಲ್ಲ. ಆತ ಯಾವುದೇ ಹುಡುಗಿಯನ್ನು ಬಲೆಗೆ ಬೀಳಿಸಿಕೊಳ್ಳುವಷ್ಟು ಸುಂದರ. ಭವಿಷ್ಯದಲ್ಲಿ ಅವನಿಂದ ಇವಳಿಗೆ ತೊಂದರೆ ಆಗಲಿಕ್ಕಿಲ್ಲವೆ? ಆತನನ್ನು ಮರೆಯುವಂತೆ ಮಾಡುವುದು ಹೇಗೆ?
- ಎಸ್. ಭಗವಾನ್

ನಾಲ್ಕೈದು ವರ್ಷ ಅವನನ್ನು ಪರೀಕ್ಷಿಸಿದ ಬಳಿಕವೇ ನಿಮ್ಮ ಗೆಳತಿ ಆತನ ಲವ್ ಪ್ರಪೋಸಲ್ ಒಪ್ಪಿಕೊಂಡಿದ್ದಾಳೆ ಎನ್ನುವುದು ನಿಶ್ಚಿತ. ಭವಿಷ್ಯದಲ್ಲಿ ತೊಂದರೆ ಆಗಲಿಕ್ಕಿಲ್ಲ ಎನ್ನುವ ವಿಶ್ವಾಸ ಅವಳಿಗೆ ಇದೆ ಎಂದಾಯಿತಲ್ಲವೆ? ಮತ್ತೆ ನಿಮಗೇಕೆ ಚಿಂತೆ? ಸುಮ್ಮನಿದ್ದುಬಿಡಿ.

-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement