ಲಕ್ಷ್ಮೀ ನಿವಾಸ್ ಮಿತ್ತಲ್ ಜನುಮ ದಿನ
1950.
ಭಾರತೀಯ ಮೂಲದ
ಬ್ರಿಟಿಷ್ ಉದ್ಯಮಿ.
ಅವರು ಅಧ್ಯಕ್ಷರಾಗಿರುವ ಆರ್ಸೆಲಾರ್ ಮಿತ್ತಲ್, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಸ್ಟೀಲ್ ಉತ್ಪಾದಿಸುವ ಸಂಸ್ಥೆ.
ಆರ್ಥರ್ ಲೆವಿಸ್ ಪುಣ್ಯತಿಥಿ
1915- 1991.
ನೊಬೆಲ್ ಪುರಸ್ಕೃತ ಬ್ರಿಟಿಷ್ ಅರ್ಥಶಾಸ್ತ್ರಜ್ಞ.
ಘಾನಾ ದೇಶದ ಮೊದಲ ಆರ್ಥಿಕ ಸಲಹೆಗಾರ.
ಅವರ 'ದಿ ಥಿಯರಿ ಆಫ್ ಎಕಾನಮಿಕ್ ಗ್ರೋಥ್' ಅರ್ಥಶಾಸ್ತ್ರದ ಮಹತ್ವದ ಕೃತಿ.
ದಿನಚರಿತೆ
1667- ಮಾನವ ಶರೀರದಲ್ಲಿ ಬೇರೆ ವ್ಯಕ್ತಿಯ ರಕ್ತ ಸೇರಿಸಬಹುದು ಎಂಬುದನ್ನು ಡಾ.ಜೀನ್ ಬ್ಯಾಪ್ಟಿಸ್ಟ್ ತೋರಿಸಿಕೊಟ್ಟರು.
1878- ವೇಗವಾಗಿ ಓಡುವಾಗ ಕುದುರೆ ಯ ನಾಲ್ಕೂ ಕಾಲುಗಳು ನೆಲದ ಮೇಲಿರುವುದಿಲ್ಲ ಎನ್ನುವುದನ್ನು ಸರಣಿ ಛಾಯಾಚಿತ್ರಗಳ ಮೂಲಕ ಎಡ್ವರ್ಡ್ ಮ್ಯೂಬ್ರಿಡ್ಜ್ ನಿರೂಪಿಸಿದರು.
ಟ್ವೀಟ್‌ಸ್ಟಾಲ್
ದಿಟ್ಟ ವ್ಯಕ್ತಿ ಸಮಸ್ಯೆ ಇದ್ದಾಗಲೂ ನಗುತ್ತಿರುತ್ತಾನೆ. ಕಷ್ಟಗಳಿಂದಲೇ ಮುನ್ನಡೆಯುವ ಸಾಮರ್ಥ್ಯ ಗಳಿಸಿಕೊಳ್ಳುತ್ತಾನೆ. ಸಂಕಷ್ಟಗಳನ್ನೇ ಊರುಗೋಲಾಗಿಸಿಕೊಂಡು ಎತ್ತರಕ್ಕೆ ಬೆಳೆಯುತ್ತಾನೆ.
-ಸೋನಾಕ್ಷಿ