ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಕ್ಷರ ವೃಕ್ಷ

Vishwanath S
Updated On : 17 Jun 2013, 12:19 pm

'ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ' ಎನ್ನುವ ಹಾಡನ್ನು ನೀವೆಲ್ಲ ಕೇಳಿರಬೇಕಲ್ಲ. ಈಗ 'ಕಾಣಿಸದೆ ಮರ ಮರಗಳಲಿ ಕನ್ನಡ ನುಡಿ' ಎಂದು ಹಾಡಬೇಕಾಗಿದೆ. ಬಾದಾಮಿ ತಾಲೂಕು ಜಮ್ಮನಕಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿತ್ಯ ವನಮಹೋತ್ಸವದ ಜತೆ ಇಂಥದೊಂದು ನುಡಿ ಉತ್ಸವವೂ ಸಾಂಗವಾಗಿದೆ.
ಈ ಶಾಲೆಯ ಆವರಣದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬಾದಾಮಿ ಮರಗಳು ಕನ್ನಡವನ್ನು ಉಸಿರಾಡುತ್ತಿವೆ. ಆಟ ಆಡುತ್ತ ಬಂದು ತಮ್ಮನ್ನು ಅಪ್ಪುವ ಎಳೆಯರಿಗೆ ಸಿರಿಗನ್ನಡ ಸಿಹಿ ಉಣಬಡಿಸುತ್ತಿವೆ. ಹೊಸದಾಗಿ ಶಾಲೆ ಸೇರಿರುವ ಮಕ್ಕಳು ಈ ಮುಂಗಾರಿನ ಮಳೆಯ ಸಿಂಚನದಲ್ಲೇ ಮರಗಳ ಎದೆಯಲ್ಲಿನ ಅಕ್ಷರಗಳನ್ನು ಜೋಡಿಸಿ ಓದುವಾಗ ಅವರ ಮೊಗದಲ್ಲಿ ಹಿರಿದಾದ ಸಂಭ್ರಮ ಇರುತ್ತದೆ. ಆಡಿ ಕಲಿ, ನೋಡಿ ಕಲಿ, ಮಾಡಿ ಕಲಿ ಎನ್ನುವ ಸಾಮಾನ್ಯ ಕಲಿಕಾ ಸೂತ್ರಕ್ಕೆ ಇಲ್ಲಿನ ಶಾಲಾ ಶಿಕ್ಷಕರು ಹೊಸ ಭಾಷ್ಯ ಬರೆದಿದ್ದಾರೆ. ಸದಾ ನಿಸರ್ಗದೊಂದಿಗೆ ಹೆಜ್ಜೆ ಹಾಕುವ ಹಳ್ಳಿಯ ಮಕ್ಕಳಿಗೆ ಪರಿಸದ ಮೂಲಕವೇ ಅಕ್ಷರ ಜ್ಞಾನ ಗಟ್ಟಿಗೊಳಿಸುವ ಪ್ರಯೋಗವಿದು. ಮರಗಳ ಕಾಂಡದಲ್ಲಿ ಕನ್ನಡ ಮೂಲಾಕ್ಷರ, ಸರಳ ಶಬ್ದ, ವಾರ, ತಿಥಿ, ನಕ್ಷತ್ರಗಳನ್ನು ಬಣ್ಣದಿಂದ ಬರೆದು ಮಕ್ಕಳಿಗೆ ಓದಲು ಪ್ರೇರೇಪಿಸುತ್ತಿದ್ದಾರೆ. ಅದು ದಿನದಿನಕ್ಕೆ ಯಶಸ್ವಿಯಾಗುತ್ತ ಸಾಗಿದೆ.
ಜಮ್ಮನಕಟ್ಟಿ ಪ್ರಾಥಮಿಕ ಶಾಲೆಗೆ ವಿಶಾಲ ಜಾಗೆಯಿದೆ. ಅಲ್ಲಿ ಮಕ್ಕಳಿಂದಲೇ ಉದ್ಯಾನವನ್ನು ರೂಪಿಸಲಾಗಿದೆ. ಅಪಾರ ಸಂಖ್ಯೆಯ ಬಾದಾಮಿ ಮರಗಳಿವೆ. ಈ ಪರಿಸರವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳಲು ಮುಂದಾಗಿರುವ ಶಾಲಾ ಪ್ರಧಾನ ಶಿಕ್ಷಕ ಜಿ.ಆರ್.ಸೋಮನಗೌಡರ್, ಶಿಕ್ಷಕ ರಮೇಶ ಹಿರೇಬೂದಿಹಾಳ ಮತ್ತಿತರರು ಈ ಮರಗಳ ಕಾಂಡಗಳಲ್ಲಿ ಕನ್ನಡ ಅಕ್ಷರ ಬಿತ್ತಿದ್ದಾರೆ. ಕಪ್ಪು- ಬಿಳುಪು ಹಲಗೆಯ ಅಕ್ಷರಗಳಿಗಿಂತ ಇವು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತಿವೆ. ಮರಬಳ್ಳಿಗಳಿಗೆ ನೀರುಣಿಸುತ್ತಲೇ ಅಕ್ಷರಗಳನ್ನು ಗುನುಗುನಿಸುತ್ತಾರೆ. ಮಕ್ಕಳಿಗೆ ಶಾಲಾ ಕೊಠಡಿಗಿಂತ ಆವರಣವೇ ಹೆಚ್ಚು ಪ್ರಿಯವೆನಿಸಿದೆ.

- ಮಲ್ಲಿಕಾರ್ಜುನ ಸಿದ್ದಣ್ಣವರ
ಚಿತ್ರಗಳು: ಹೇಮಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments