ಸಲಿಂಗ ಕಾಮದ ಆಸಕ್ತಿ...
ನನಗೆ 26 ವರ್ಷ. ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ. 10 ವರ್ಷಗಳಿಂದ ಹಸ್ತಮೈಥುನದ ಅಭ್ಯಾಸವಿದೆ. ಸಲಿಂಗ ಕಾಮದ ಬಗ್ಗೆಯೂ ಆಸಕ್ತಿ ಇದೆ. ಮದುವೆಯಾದರೆ ತೊಂದರೆಗಳು ಎದುರಾಗಬಹುದೆ?
- ಹೆಸರು ಬೇಡ, ಊರು ಬೇಡ
ಹಸ್ತಮೈಥುನದಿಂದ ಯಾವ ಅಪಾಯವೂ ಇಲ್ಲ. ವೀರ್ಯ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಒಂದು ದ್ರವ ಅಷ್ಟೆ. ವೀರ್ಯನಷ್ಟದಿಂದ ಯಾವ ತೊಂದರೆಯೂ ಇಲ್ಲ. ಸಲಿಂಗ ಕಾಮದ ಬಗ್ಗೆ ಕೇವಲ ಆಸಕ್ತಿ ಇದೆಯೋ ಅಥವಾ ಯಾರದ್ದಾದರೂ ಸಂಪರ್ಕ ಮಾಡಿದ್ದೀರೋ ಹೇಳಿಲ್ಲ. ಯಾವುದಕ್ಕೂ ಒಮ್ಮೆ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ. ಅವರು ಸಲಿಂಗ ಕಾಮದ ಕುರಿತಾದ ಭಾವನೆಗಳನ್ನು ಹೋಗಲಾಡಿಸಿಕೊಳ್ಳಲು ನೆರವಾಗುವರು.
-ಡಾ. ಸ್ಯಾಟಲೈಟ್
anekaby2@gmail.com