ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಲೆಬುರುಡೆ ಪ್ರಮುಖ ಪಾತ್ರ

Lingaraj Badiger
Updated On : 17 Jun 2013, 4:29 am

ಮುರಿದ ಮೂಳೆಗಳಾಗಿದ್ದಲ್ಲಿ ಮಾತ್ರ ಅವು ಪ್ರಾಣಿ ಅಥವಾ ಮನುಷ್ಯನದ್ದೋ ಎಂಬುದನ್ನು ಸುಲಭವಾಗಿ ಪತ್ತೆ ಮಾಡುವುದು ಕಷ್ಟ. ಪುಡಿಯಾಗಿಲ್ಲದ ಮೂಳೆಗಳು ಸಿಕ್ಕಿದರೆ ನೋಡಿದ ತಕ್ಷಣ ಅದು ಪ್ರಾಣಿ ಅಥವಾ ಮನುಷ್ಯನದ್ದು ಎಂದು ಹೇಳಬಹುದು. ಅದರಲ್ಲೂ ಮೂಳೆಗಳು ಪತ್ತೆಯಾದ ಸಂದರ್ಭದಲ್ಲಿ ತಲೆ ಬುರುಡೆ ಇದ್ದಲ್ಲಿ ಮಹಿಳೆಯೋ, ಪುರುಷನೋ, ಮಗು, ಯುವಕ, ಯುವತಿಯೋ, ಮೃತಪಡುವ ವೇಳೆ ಅವರಿಗಾಗಿದ್ದ ವಯಸ್ಸು ಪತ್ತೆ ಮಾಡಬಹುದು. ಕಣ್ಣು, ಹಲ್ಲು, ಮೂಳೆಗಳಿಗೆ ಎಷ್ಟು ವಯಸ್ಸಾಗಿದೆ ಎಂಬಿತ್ಯಾದಿ ಮಾಹಿತಿ ಆಧರಿಸಿ ಅದನ್ನು ಪತ್ತೆ ಮಾಡುತ್ತಾರೆ. ತಲೆಬುರುಡೆ ಚೆನ್ನಾಗಿದ್ದರೆ ಇವೆಲ್ಲ ಸಾಧ್ಯ.

ಯಾರಾದರೂ ಕಾಣೆಯಾಗಿದ್ದಲ್ಲಿ ಅವರ ಪೋಷಕರು, ತಮ್ಮ, ತಂಗಿ, ಅಣ್ಣ ಅಥವಾ ಹತ್ತಿರದ ಕುಟುಂಬ ಸದಸ್ಯರ ಡಿಎನ್‌ಎ ಹಾಗೂ ಮೂಳೆಯಿಂದ ಡಿಎನ್‌ಎ ಪರೀಕ್ಷೆ ಮಾಡಲಾಗುತ್ತದೆ. ಅದು ಹೊಂದಾಣಿಕೆ ಆದರೆ, ಪತ್ತೆಯಾದವರ ಸುಳಿವು ಸಿಗುತ್ತದೆ. ಕೇವಲ ಮೂಳೆಯ ಡಿಎನ್‌ಎ ಪರೀಕ್ಷೆಯಿಂದ ಅವರು ಯಾರು ಎಂಬುದನ್ನು ಹೇಳಲು ಆಗುವುದಿಲ್ಲ. ಅದಕ್ಕೂ ಮುನ್ನ ತಲೆಬುರುಡೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬರೀ ಮೈಮೂಳೆಗಳು ಸಿಗುತ್ತವೆ. ಕೆಲವೊಮ್ಮೆ ಮಾತ್ರ ತಲೆಬುರುಡೆ ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು 'ಸೂಪರ್ ಇಂಫೋಸಿಸ್‌' ಮೂಲಕ ಮೂಳೆ ಯಾರದ್ದು ಎಂಬುದನ್ನು ಪತ್ತೆ ಮಾಡುತ್ತಾರೆ. 'ಸೂಪರ್ ಇಂಫೋಸಿಸ್‌' ಅಂದರೆ ತಲೆಬುರುಡೆ ಸೃಷ್ಟಿಮಾಡುವುದು. ಪ್ರತಿಯೊಬ್ಬರ ಮೂಳೆಗೆ ಅನುಗುಣವಾಗಿ ಅವರ ತಲೆಬುರುಡೆ ಇರುತ್ತದೆ. ಅದರಂತೆ ಪತ್ತೆಯಾಗುವ ಮೂಳೆಗಳನ್ನು ಪರಿಶೀಲಿಸಿ, ಅವುಗಳನ್ನು ಆಧರಿಸಿ ತಲೆಬುರುಡೆ ಸಿದ್ಧಪಡಿಸಿ ಅದು ಯಾರು ಎಂಬ ಗುರುತು ಪತ್ತೆ ಮಾಡಲಾಗುತ್ತದೆ. ಫ್ರಂಟಲ್ ಮತ್ತು ಲ್ಯಾಟರಲ್ ಪರೀಕ್ಷೆ ಸೇರಿದಂತೆ ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ.

ಆದರೆ, ರಾಜ್ಯದಲ್ಲಿ 'ಸೂಪರ್ ಇಂಫೋಸಿಸ್‌' ಸೌಲಭ್ಯವಿಲ್ಲ. ಹಾಗಾಗಿ ಅಂತಹ ಪ್ರಕರಣಗಳಲ್ಲಿ ಪಕ್ಕದ ರಾಜ್ಯದ ಪ್ರಯೋಗಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ.

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement