ಬದುಕೋ ದಾರಿ ಯಾವುದು?
ದೇವರ ಬಗ್ಗೆ ಯೋಚನೆ ಮಾಡಿ ಮಾಡಿ ಬದುಕೋ ಆಸಕ್ತಿನೇ ಹೊರಟು ಹೋಗಿದೆ. ಜೀವನವನ್ನು ತುಂಬಾ ಪ್ರೀತಿಯಬೇಕು. ಹೇಗೆ ಅಂತ ಗೊತ್ತಾಗ್ತಿಲ್ಲ.
- ದಯಾನಂದ
ಸಾಮಾನ್ಯವಾಗಿ ದೇವರನ್ನು ಅತಿಯಾಗಿ ನಂಬುವವರು ಯಾರು? ತಮ್ಮ ಸಾಮರ್ಥ್ಯದಲ್ಲಿ ತಮಗೇ ನಂಬಿಕೆ ಇಲ್ಲದವರು. ನೀವೂ ಹಾಗೆಯೇ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದೀರಿ ಅನ್ನಿಸುತ್ತದೆ. ಮೊದಲು ನಿಮ್ಮ ಬಗ್ಗೆ ನೀವು ವಿಶ್ವಾಸ ಬೆಳೆಸಿಕೊಳ್ಳಿ. ಯಾವ ಕಾರಣಕ್ಕೂ ಬದುಕು ವ್ಯರ್ಥವಾಗಲು ಬಿಡುವುದಿಲ್ಲ, ಏನಾದರೂ ಸಾಧಿಸುತ್ತೇನೆ ಎನ್ನುವ ಸಂಕಲ್ಪವನ್ನು ಈ ಕ್ಷಣವೇ ಮಾಡಿಕೊಳ್ಳಿ. ಏನೇ ಎದುರಾದರೂ ಎದೆಗುಂದಬೇಡಿ. ಒಂದು ನೆನಪಿಟ್ಟುಕೊಳ್ಳಿ. ದೇವರನ್ನು ಗೆಳೆಯನಂತೆ ಕಾಣಬೇಕೇ ವಿನಾ ಭಯದಿಂದ ಅಲ್ಲ. ಭಗವಂತನ ಮೇಲೆ ಅವಲಂಬಿತರಾಗುವ ಬದಲು ಆತನನ್ನು ಒಳ್ಳೆಯ ಮಾರ್ಗದರ್ಶಕ ಎಂದುಕೊಳ್ಳಿ.
-ಡಾ. ಸ್ಯಾಟಲೈಟ್
anekaby2@gmail.com