ಇಂಗ್ಲೀಷ್ ಪಂಡಿತನಾಗೋ ಆಸೆ...
ನನಗೆ ಇಂಗ್ಲೀಷ್ ಕಲಿಯಬೇಕಿದೆ, ಆದರೆ ಅವಕಾಶ ಆಗುತ್ತಿಲ್ಲ. ಇಂಗ್ಲೀಷ್ ಕಲಿಯಲು ಏನು ಮಾಡಬೇಕು. ಇಂಗ್ಲೀಷ್ನಲ್ಲಿ ಪರಿಣಿತನಾಗಲು ಒಳ್ಳೆಯ ಮಾರ್ಗ ತಿಳಿಸಿ.
- ಅನಿಲ್
ಇಂಗ್ಲೀಷ್ ಕಬ್ಬಿಣದ ಕಡಲೆಯಲ್ಲ ಅಥವಾ ಅರಗಿಸಿಕೊಳ್ಳಲು ಸಾಧ್ಯವಾಗದ ಭಾಷೆಯಲ್ಲ. ಅದನ್ನು ಕಲಿಯಲು ನೀವು ಕೋರ್ಸ್ಗಳಿಗೆ ಹೋಗಲೇಬೇಕೆಂಬ ಅನಿವಾರ್ಯತೆಯೂ ಇಲ್ಲ. ಹಲವಾರು ಪುಸ್ತಕಗಳು, ಸಿ.ಡಿಗಳು ಬಂದಿವೆ. ಸಮೀಪದ ಪುಸ್ತಕದ ಅಂಗಡಿಗಳಲ್ಲಿ ವಿಚಾರಿಸಿ. ಇಂಗ್ಲೀಷ್ ಪತ್ರಿಕೆ, ಮ್ಯಾಗಜಿನ್ಗಳನ್ನು ನಿತ್ಯವೂ ತಪ್ಪದೇ ಓದುವ ಅಭ್ಯಾಸ ರೂಢಿಸಿಕೊಳ್ಳಿ. ಯಾರ ಪ್ರಯತ್ನವೂ ಇಲ್ಲದೆ ಕೆಲವೇ ತಿಂಗಳುಗಳಲ್ಲಿ ಇಂಗ್ಲೀಷ್ನಲ್ಲಿ ನಿರರ್ಗಳವಾಗಿ ಮಾತನಾಡುವ, ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತೀರಿ.
-ಡಾ. ಸ್ಯಾಟಲೈಟ್
anekaby2@gmail.com