ಅಮರೀಶ್ ಪುರಿ ಜನುಮ ದಿನ
1932.
ಭಾರತೀಯ ಸಿನಿಮಾದಪ್ರಖ್ಯಾತ ಬಹುಭಾಷಾ ಖಳನಟ.
'ಮಿಸ್ಟರ್ ಇಂಡಿಯಾದ' 'ಮೊಗ್ಯಾಂಬೋ ಖುಷ್ ಹುವಾ' ವಾಕ್ಯದ ಮೂಲಕ ಪ್ರಸಿದ್ಧರಾದರು.
ತಮ್ಮ ನಟನಾ ಸಾಮರ್ಥ್ಯ, ಧ್ವನಿ ಹಾಗೂ ಸಂಭಾಷಣಾ ಶೈಲಿಗೆ ಪ್ರಸಿದ್ಧರು.
ಇಯಾ ಫ್ರಾಂಕ್ ಪುಣ್ಯತಿಥಿ
1908-1990.
ರಷ್ಯನ್ ಪರಮಾಣುಭೌತ ಶಾಸ್ತ್ರಜ್ಞ.
ಪರಮಾಣು ವೇಗ ಪತ್ತೆ ಮಾಡುವ ಹೊಸ ವಿಧಾನ ಅಭಿವೃದ್ಧಿಪಡಿಸಿದರು.
ಪರಮಾಣು ಭೌತಶಾಸ್ತ್ರದಲ್ಲಿನ ಸಂಶೋಧನೆಗಾಗಿ ನೊಬೆಲ್.
ದಿನಚರಿತೆ
1897- ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ದಾಮೋದರ್ ಹರಿ ಚಾಪೇಕರ್ ಅವರನ್ನು ಗಲ್ಲಿಗೇರಿಸಲಾಯಿತು.
1898- ಭಾರತದಲ್ಲಿ 19ನೇ ಶತಮಾನದ ಕೊನೆಯ ಸೂರ್ಯಗ್ರಹಣ ಗೋಚರ.
1941- ಜರ್ಮನಿಯು 'ಆಪರೇಷನ್ ಬಾರ್ಬರೋಸಾ' ಕಾರ್ಯಾಚರಣೆ ಅಂಗವಾಗಿ ರಷ್ಯಾದ ಮೇಲೆ ಆಕ್ರಮಣ ಮಾಡಿತು.
ಟ್ವೀಟ್‌ಸ್ಟಾಲ್
ಭಾರತದ ರಾಷ್ಟ್ರಗೀತೆಯಲ್ಲಿ ಏನೋ ವಿಶೇಷವಿದೆ. ಅದು ಶ್ರೇಷ್ಠ ಎಂದು ನಮಗೆಲ್ಲ ಗೊತ್ತು. ಆ ಶ್ರೇಷ್ಠತೆಗೆ ತಕ್ಕಂತೆ ನಾವು ಬದುಕಿ ತೋರಿಸಬೇಕಾಗಿದೆ.
-ಬೊಮನ್ ಇರಾನಿ, ಬಾಲಿವುಡ್ ನಟ