ವಿಪರ್ಯಾಸ!
ತನ್ನ ಮಗ ಪ್ರತಿಷ್ಠಿತ ಕಾಲೇಜಿನಲ್ಲಿ ಎಂ.ಬಿ.ಎ. ಸೀಟು ಪಡೆದು ಕಾಲೇಜಿನ ಪ್ರತಿಷ್ಠೆಯ ಸಮವಸ್ತ್ರ ಕೋಟು ಧರಿಸಲು ಪ್ರಾರಂಭಿಸಿದ ನಂತರದ ದಿನಗಳಲ್ಲಿ ಆತ ತನ್ನ ಮದುವೆಯಲ್ಲಿ ಧರಿಸಿದ್ದ ಕೋಟ್ ಧರಿಸಲು ಪ್ರಾರಂಭಿಸಿದ. ಇದನ್ನು ಕಂಡ ಜನರು ಅದನ್ನು ಅಹಂಕಾರದ ಸಂಕೇತವೆಂದೇ ಭಾವಿಸಿದರು. ಆದರೆ ಮಗನ ಕಾಲೇಜು ಖರ್ಚಿಗಾಗಿ ಇದ್ದ ಹಣವನ್ನೆಲ್ಲಾ ವ್ಯಯಿಸಿದ ಬಡ ತಂದೆ, ತನ್ನ ಹರಿದ ಶರ್ಟನ್ನು ಮುಚ್ಚಿಕೊಳ್ಳಲು ಕೋಟ್ ಧರಿಸುತ್ತಿದ್ದ ವಿಷಯ ಯಾರ ಅರಿವಿಗೂ ಬರಲೇ ಇಲ್ಲ!
...
ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಭಾರೀ ರ್ಯಾಲಿಯೊಂದನ್ನು ನಡೆಸಿ ತಮ್ಮನ್ನು ಕತ್ತೆಯೆಂದು ಸಂಬೋಧಿಸಿದ ವಿರೋಧಿ ಗುಂಪಿನ ನಾಯಕರನ್ನು ನಾಯಿ, ಹಂದಿಗೆ ಹೋಲಿಸಿ ನಿಂದಿಸಿದರು. ನಂತರ ಇಬ್ಬರ ಹಿಂಬಾಲಕರ ನಡುವೆ ಘರ್ಷಣೆ ಕೂಡ ನಡೆಯಿತು. ಅಲ್ಲಿ ನಡೆದ ಭಾರೀ ಭೋಜನದ ನಂತರ ಬಿಸಾಡಿದ ಎಲೆಗಳಲ್ಲಿ ಉಳಿದ ಆಹಾರವನ್ನು ತಿನ್ನಲು ಬಂದ ಹಂದಿ, ಕತ್ತೆ, ನಾಯಿಗಳು ಸಾಮರಸ್ಯದಿಂದ ಹಂಚಿಕೊಂಡು ತಿನ್ನುತ್ತಿದ್ದ ದೃಶ್ಯ ನಾಯಕರನ್ನು ಅಣಕಿಸುವಂತಿತ್ತು!
-ಇಫ್ಕೋ ಗೋವಿಂದರಾಜ, ಬೀದರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.