ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇವರು ಸದಾ ಸಿದ್ಧ, ಸಹಕರಿಸಿ

Vishwanath S
Updated On : 23 Jun 2013, 3:33 am

ರಾಜ್ಯದಲ್ಲಿ ಮುಖ್ಯಕಚೇರಿ ಸೇರಿ 185 ಅಗ್ನಿಶಾಮಕ ದಳ ಠಾಣೆಗಳಿವೆ. ತಾಲೂಕು ಕೇಂದ್ರ, ಜಿಲ್ಲೆ, ನಗರ ಹಾಗೂ ಮಹಾನಗರಗಳಲ್ಲಿ ಅಲ್ಲಿನ ಜನಸಂಖ್ಯೆಗನುಗುಣವಾಗಿ ಆಯಾ ನಗರಗಳಲ್ಲಿ ಅಗ್ನಿಶಾಮಕ ದಳದ ಕೇಂದ್ರ ಸ್ಥಾಪಿಸಲಾಗಿದೆ ಹಾಗೂ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ.
ಅದೇ ರೀತಿ ಅಲ್ಲಿನ ಪ್ರದೇಶಕ್ಕನುಗುಣವಾಗಿ ವಾಹನಗಳು, ಅಂದರೆ ಕೆಲವು ಅಗ್ನಿಶಾಮಕ ಠಾಣೆಗಳಲ್ಲಿ 1,2,3 ಹೀಗೆ... ಬೆಂಗಳೂರಿನಂತಹ ಮಹಾನಗರಗಳಲ್ಲಿ ಠಾಣೆಗೆ ಐದಾರು ವಾಹನಗಳು ಇರುತ್ತವೆ. ಎಲ್ಲಾ ವಾಹನಗಳಲ್ಲೂ ನೀರು ತುಂಬುವ ವ್ಯವಸ್ಥೆ ಇರುತ್ತದೆ. ಆದರೆ, ಅದು ಸಹ ಪ್ರದೇಶಕ್ಕನುಗುಣವಾಗಿ ಎಷ್ಟು ನೀರು ಬೇಕು ಅಷ್ಟನ್ನು ತುಂಬಲು ಸಾಮರ್ಥ್ಯ ಇರುವ ವಾಹನ ನೀಡಲಾಗಿರುತ್ತದೆ.
ಒಂದು ವಾಹನದಲ್ಲಿ 6 ಸಾವಿರದಿಂದ 15 ಸಾವಿರ ಲೀಟರ್‌ವರೆಗೆ ನೀರು ತುಂಬಬಹುದು. ಅದೇ ರೀತಿ ರಾಜ್ಯದಲ್ಲಿ 6,9,11 ಹಾಗೂ 15 ಸಾವಿರ ಲೀ. ನೀರು ತುಂಬುವ ಸಾಮರ್ಥ್ಯವುಳ್ಳ ವಾಹನಗಳಿವೆ. ವಾಹನ ಠಾಣೆಯಲ್ಲಿ ಸುಮ್ಮನೆ ನಿಂತಿದ್ದರೂ ಸಹ ಅದರಲ್ಲಿ ಸದಾ ನೀರನ್ನು ತುಂಬಿರಲಾಗುತ್ತದೆ. ತುರ್ತಾಗಿ ಯಾವುದಾದರೂ ಕರೆ ಬಂದಲ್ಲಿ ಅಗತ್ಯವಿರುವ ವಾಹನಗಳನ್ನು ಆ ಸ್ಥಳಕ್ಕೆ ಕಳುಹಿಸಿಕೊಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನೀರು ತುಂಬಲು ಆಗುವುದಿಲ್ಲ. ಕರೆ ಬಂದಾಗ ಸ್ಥಳಕ್ಕೆ ಧಾವಿಸಿ ಜನರನ್ನು ರಕ್ಷಿಸುವುದು ಹಾಗೂ ಮುಂದಾಗುವ ಅಪಾಯ ತಡೆಗಟ್ಟುವುದು ಇವರ ಕರ್ತವ್ಯ. ಹಾಗಾಗಿ ಅವರು ಸದಾ ಸಿದ್ಧರಾಗಿರುತ್ತಾರೆ.
ಘಟನೆ ನಡೆದ ಸ್ಥಳಗಳಿಗೆ ಹೋಗಿ ಅಲ್ಲಿನ ಬೆಂಕಿ ನಂದಿಸಿ ನೀರು ಖಾಲಿಯಾದ ತಕ್ಷಣ ವಾಹನಗಳು ತಮ್ಮ ಠಾಣೆಗೆ ಹಿಂತಿರುಗುತ್ತವೆ. ಒಂದು ವೇಳೆ ಠಾಣೆಯಲ್ಲಿರುವ ಎಲ್ಲಾ ವಾಹನಗಳು ಸ್ಥಳಕ್ಕೆ ಹೋಗಿ, ಬೆಂಕಿ ನಂದಿಸಲು ಸಾಧ್ಯವಾಗದಿದ್ದಾಗ, ನೀರು ಖಾಲಿಯಾಗಿರುವ ವಾಹನಗಳು ಮತ್ತೆ ಠಾಣೆಗೆ ಹಿಂದಿರುಗಿ ನೀರು ತುಂಬಿಸಿಕೊಂಡು ಘಟನೆ ನಡೆದ ಸ್ಥಳಕ್ಕೆ ಹೋಗುತ್ತಾವೆ. ಇದಕ್ಕೆ ಸಂಚಾರ ಪೊಲೀಸರು ಹಾಗೂ ಸ್ಥಳೀಯರ ಸಹಕಾರ ಅತ್ಯಗತ್ಯ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement