ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತುಂಬುಡುಗೆ

Vishwanath S
Updated On : 24 Jun 2013, 12:12 pm

ತುಂಡುಡುಗೆ ಹೋಯ್ತು, ಇನ್ನೇನಿದ್ದರೂ ತುಂಬುಡುಗೆಯ ಕಾಲ.
ಬೇಸಿಗೆ ಮುಗಿದಿದೆ, ಈಗೇನಿದ್ದರೂ ಮಳೆಗಾಲ, ಮುಂದೆ ಚಳಿಗಾಲ. ಹೀಗಾಗಿ, ಬೇಸಿಗೆಯಲ್ಲಿ ತೊಡುತ್ತಿದ್ದ ತೆಳ್ಳನೆಯ ಬಟ್ಟೆಗಳಿಗೀಗ ಬೈಬೈ. 'ಹವಾ'ಕ್ಕೆ ಮೈ ಒಡ್ಡುತ್ತಿದ್ದ 'ಮೈ'ಯೇ ಮಳೆ-ಚಳಿಗೆ ಮುದುಡುತ್ತಿದೆ. ಬೆಚ್ಚನೆಯ ಅಪ್ಪುಗೆಗೆ ಹಾರೈಸುತ್ತಿದೆ. ಕಾಲಕ್ಕೆ ತಕ್ಕಂತೆ ಮಾನಿನಿಯರ ಡ್ರೆಸ್‌ಕೋಡ್ ಬದಲಾಗಿದೆ.
ಜಾಕೆಟ್‌ಗಳ ಸಂಗ್ರಹಕ್ಕೆ ಮುಗಿಬಿದ್ದಿದ್ದಾರೆ ಹೆಂಗಳೆಯರು. ವಾರ್ಡ್‌ರೋಬ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಜಾಕೆಟ್‌ಗಳಿಗೀಗ ಮೈ ಏರುವ ತವಕ. ಸೀಸನ್ ಕೂಡ ಹಾಗೇ ಇದೆ. ಆದರೆ, ಇದ್ದುದಕ್ಕಿಂತಲೂ ಹೊಸದರತ್ತ ತುಡಿಯುವ ವ್ಯಾಮೋಹ. ಡ್ರೆಸ್ ವಿಚಾರದಲ್ಲಿ ಈ ಭಾವಕ್ಕೆ ಬೇರೆ ಮಾತಿಲ್ಲ. ಅದಕ್ಕಾಗಿಯೇ ಕಲರ್‌ಫುಲ್ ಜಾಕೆಟ್‌ಗಳತ್ತ ಮನಸ್ಸು ಎಳೆದಿದೆ. ಫ್ಯಾಷನ್ ಜಗತ್ತು ಕೂಡ ವೈವಿಧ್ಯಮಯ ಜಾಕೆಟ್‌ಗಳನ್ನು ಅವರ ಅಭಿರುಚಿಗೆ ತಕ್ಕಂತೆ ಅಪ್‌ಡೇಟ್ ಮಾಡುತ್ತಲೇ ಇದೆ.

ಹಳದಿ ವ್ಯಾಮೋಹ
ಕಲರ್ ಕಲರ್ ಜಾಕೆಟ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೆಚ್ಚಾಗಿ ಹಳದಿ ಬಣ್ಣದ ಜಾಕೆಟ್‌ಗಳು ಸೇಲ್ ಆಗುತ್ತಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಕಮ್ ಮಾರಾಟಗಾರ ಮರ್ವಿನ್ ಮಲ್ಹೋತ್ರಾ. ಹಳದಿ ಬಣ್ಣ ಸಿಂಪ್ಲಿ ಆಕರ್ಷಕ ಮತ್ತು ಕೂಲ್. ಅಲ್ಲದೆ ಬ್ಲಾಕ್ ಅಂಡ್ ವೈಟ್ ಬಿಟ್ಟರೆ ಮಾನಿನಿಯರ ಹೆಚ್ಚಿನ ಒಲವು ಎಲ್ಲೋ ಮೇಲೆಯೇ. ಮೋಸ್ಟ್ ಪಾಪ್ಯುಲರ್ ಐಕಾನ್‌ಗಳ ಫ್ಯಾಷನ್ ಶೋ ಇತ್ತೀಚಿಗೆ ನಗರದಲ್ಲಿ ನಡೆಯಿತು. ಅಲ್ಲಿಯೂ ಈ ಹಳದಿ ಜಾಕೆಟ್‌ಗಳದ್ದೇ ಕಾರುಬಾರು. ಅಷ್ಟರ ಮಟ್ಟಿಗೆ 'ಹವಾ' ಎಬ್ಬಿಸಿದೆ ಎಲ್ಲೋ.   

ಮಿಕ್ಸ್ ಅಂಡ್ ಮ್ಯಾಚ್
ಮಿಕ್ಸ್ ಅಂಡ್ ಮ್ಯಾಚ್ ಇಲ್ಲಿಯೂ ಕೂಡ ಸಕತ್ತಾಗಿಯೇ ಕೆಲಸ ಮಾಡುತ್ತಿದೆ. ಕಲರ್‌ಪುಲ್ ಶರ್ಟ್‌ಗಳು,  ಸ್ಲೀವ್‌ಲೆಸ್ ಶರ್ಟ್‌ಗಳ ಮೇಲೆ ಮ್ಯಾಚಿಂಗ್ ಕಾನ್ಸೆಪ್ಟ್‌ನಡಿಯಲ್ಲಿ ತೊಡುವಂತೆ ಡ್ರೆಸ್‌ಕೋಡ್ ಬದಲಾಗಿದೆ. ಸಿಂಪ್ಲಿ ಲುಕ್ ಆದರೂ, ಸೀಸನ್‌ನಲ್ಲೂ ಮಿಕ್ಸ್ ಅಂಡ್ ಮ್ಯಾಚ್ ಅಂದರೆ ನಿಮ್ಮ ಅಕ್ಕಪಕ್ಕದವರು ಹುಬ್ಬೇರಿಸಿಯಾರು? ಬೆಲೆ ಕೂಡ ಅಷ್ಟೇನಿಲ್ಲ. ಮಾರುಕಟ್ಟೆಯಲ್ಲಿ 250ರಿಂದ ಹಿಡಿದು 2500ರವರೆಗೂ ಬ್ರಾಂಡೆಡ್ ಜಾಕೆಟ್‌ಗಳು ಲಭ್ಯವಿವೆ. ಕೊಳ್ಳುವ ಮನಸ್ಸಿಗೂ, ಸೆಲೆಕ್ಟ್ ಮಾಡೋ 'ಐ'ಗೂ ಬಿಟ್ಟ ವಿಚಾರವದು.

- ಭಾಗ್ಯ ಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments