ಅವ್ಯಕ್ತ ಭಯ
42 ವರ್ಷ. ಇಬ್ಬರು ಹೆಣ್ಣು ಮಕ್ಕಳು. ಈಗಿನ ಕಾಲದಲ್ಲಿ ಗಂಡು-ಹೆಣ್ಣು ಎನ್ನುವ ವ್ಯತ್ಯಾಸ ಮಾಡಬಾರದು ಎನ್ನುವ ಅರಿವು ನನಗಿದೆ. ಆದರೂ ಮಕ್ಕಳ ಬಗ್ಗೆ ಅವ್ಯಕ್ತ ಭಯ ಕಾಡುತ್ತಿದೆ. ಕಾರಣವೇನು?
- ಪಿ.ಮುರಳಿ, ಬೆಂಗಳೂರು
ಮೊದಲನೇ ಕಾರಣ- ನಿಮ್ಮ ಮನಸ್ಸಿನಲ್ಲಿ ಅವ್ಯಕ್ತವಾಗಿ ಲಿಂಗ ತಾರತಮ್ಯ ಉಳಿದಿರುವುದು. ಎರಡನೇ ಕಾರಣ- ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ. ಭಯದಿಂದ ಹೊರಬರಲು ಇರುವ ದಾರಿ- ಎಂತಹ ಪರಿಸ್ಥಿತಿಯನ್ನೂ ಸಮರ್ಥವಾಗಿ ಎದುರಿಸುವ ಛಲವನ್ನು ಈಗಿನ ಹೆಣ್ಣು ಮಕ್ಕಳು ಬೆಳೆಸಿಕೊಂಡಿರುತ್ತಾರೆ. ಗಂಡು ಮಕ್ಕಳಿಗಿಂತ ಹೆಚ್ಚಿನ ಧೈರ್ಯ ನಿಮ್ಮ ಹೆಣ್ಣು ಮಕ್ಕಳಲ್ಲಿದೆ ಎನ್ನುವುದನ್ನು ಮನಗಾಣಿ. ಆತ್ಮವಿಶ್ವಾಸ, ಛಲ ಬೇಕಿರುವುದು ನಿಮಗೆ. ನಿಮ್ಮ ಧೈರ್ಯಕ್ಕೆ ಬೇಕಿದ್ದರೆ ಅವರಿಗೆ ಕರಾಟೆ ಕಲಿಸಿ!
-ಡಾ. ಸ್ಯಾಟಲೈಟ್
anekaby2@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.