ಖಾಸಗಿ ಟ್ಯಾಂಕರ್ಗಳ ಮೊರೆ
ಆಯಾ ವಿಭಾಗದ ಅಗ್ನಿಶಾಮಕ ಠಾಣೆಗಳಲ್ಲಿ ಟ್ಯಾಂಕರ್, ನೀರಿನ ತೊಟ್ಟಿಯಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳಲಾಗುತ್ತದೆ. ಬೇಸಿಗೆ ಕಾಲದಲ್ಲಿ ಸಾಕಷ್ಟು ಠಾಣೆಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನೀರಿನ ಕೊರತೆ ಎದುರಿಸುತ್ತಾರೆ. ಹಾಗಾಗಿ ಜನರು ಸಹ ಮಿತವಾಗಿ ನೀರನ್ನು ಬಳಸಬೇಕು. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗುತ್ತದೆ.
ನೀರಿನ ಅಭಾವ ಕಂಡುಬಂದಂಥ ಸಮಯದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಖಾಸಗಿ ನೀರಿನ ಟ್ಯಾಂಕರ್ಗಳ ಮಾಲೀಕರ ಮೊರೆ ಹೋಗುತ್ತಾರೆ.
ಸಣ್ಣಪುಟ್ಟ ಮನೆಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ನೀರಿನ ಪೈಪ್ ಮೂಲಕ ಬೆಂಕಿ ನಂದಿಸುತ್ತಾರೆ. ಅದನ್ನು ಬ್ರ್ಯಾಂಚ್(ಬೆಂಕಿ ನಂದಿಸಲು ನೀರು ಬಿಡುವ ಸಾಧನ ಅಥವಾ ಪೈಪ್) ಎನ್ನಲಾಗುತ್ತದೆ.
ಐದಾರು ಕಟ್ಟಡದಲ್ಲಿ ಅನಾಹುತ ಸಂಭವಿಸಿದರೆ, ನೀರಿನ ಪೈಪ್ನ್ನು ಮೆಟ್ಟಿಲ ಮುಖಾಂತರ ತೆಗೆದುಕೊಂಡು ಹೋಗುತ್ತಾರೆ. ಬಹುಮಹಡಿ ಕಟ್ಟಡಗಳಿಗೆ ಬೆಂಕಿ ಬಿದ್ದಾಗ ನೀರಿನ ಪೈಪ್ನಿಂದ ಬೆಂಕಿ ನಂದಿಸಲು ಸಾಧ್ಯವಿಲ್ಲ. ಬಹುಮಹಡಿ ಕಟ್ಟಡದ ತುಂಬ ಬೆಂಕಿ ಆವರಿಸಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅದರ ಒಳಗೆ ಹೋಗಲು ಸಾಧ್ಯವಿಲ್ಲ ಎಂದಾಗ ಸಿಬ್ಬಂದಿ ವಿವಿಧ ಮಾರ್ಗಗಳನ್ನು ಬಳಸಬೇಕಾಗುತ್ತದೆ.
ಅಂದರೆ, ಅನಾಹುತ ಸಂಭವಿಸಿದಾಗ ಬೆಂಕಿ ನಂದಿಸಲು, ಜನರನ್ನು ರಕ್ಷಿಸಲು ವಿವಿಧ ವಿಧಗಳಿವೆ. ಎಲ್ಲಾ ಸಮಯದಲ್ಲೂ ಎಲ್ಲಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗುವುದಿಲ್ಲ. ಸಣ್ಣಪುಟ್ಟ ಅನಾಹುತ, ದೊಡ್ಡ ಅನಾಹುತ ಸೇರಿದಂತೆ ಆಯಾ ಸಂದರ್ಭಕ್ಕೆ ತಕ್ಕಂತೆ ನುರಿತ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ.
ಅದಕ್ಕಾಗಿ ಅವರಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಕ್ರಮೇಣವಾಗಿ ಎಲ್ಲಾ ಸಿಬ್ಬಂದಿಗೂ ತರಬೇತಿ ಕೊಡಲಾಗುತ್ತದೆ.
- ಶಾಂತ ತಮ್ಮಯ್ಯ