ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಂದರ್ಭಕ್ಕನುಗುಣವಾಗಿ ಬಳಕೆ

Lingaraj Badiger
Updated On : 25 Jun 2013, 4:55 am

ಶಾರ್ಟ್ ಬ್ರ್ಯಾಂಚ್(ಕಡಿಮೆ ಒತ್ತಡದಲ್ಲಿ ನೀರು ಹರಿಸುವುದು), ಹೈಪ್ರಷರ್ ಬ್ರ್ಯಾಂಚ್(ಹೆಚ್ಚು ಒತ್ತಡವಿರುವ ದೊಡ್ಡ ಪೈಪ್‌ಬಳಸಿ ನೀರು ಹಾಕುವುದು), ಲಾರ್ಜ್ ಬ್ರ್ಯಾಂಚ್, ಸ್ಪೆಷಲ್ ಬ್ರ್ಯಾಂಚ್(ಬೆಂಕಿ ಅನಾಹುತ ಸಂಭವಿಸಿದಾಗ ಕಟ್ಟಡದ ಎತ್ತರ ಹಾಗೂ ಪರಿಸ್ಥಿತಿ ಆಧರಿಸಿ ಇವುಗಳನ್ನು ಬಳಸಲಾಗುತ್ತದೆ), ಫೋಂ ಮೇಕಿಂಗ್ ಬ್ರ್ಯಾಂಚ್(ಇದನ್ನು ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್, ಬೆಂಕಿ ಅನಾಹುತದಲ್ಲಿ ಹೊಗೆ ತುಂಬಿಕೊಂಡಾಗ, ಅನಿಲ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದಾಗ ಬಳಸಲಾಗುತ್ತದೆ).
ಜತೆಗೆ ಲ್ಯಾಡರ್(ಏಣಿ), ರೋಪ್(ಹಗ್ಗ), ಎಎಲ್‌ಪಿ(ಏರಿಯಲ್ ಲ್ಯಾಡರ್ ಪ್ಲಾಟ್‌ಫಾರಂ)ಗಳನ್ನು ಬಳಸಿಯೂ ರಕ್ಷಣಾ ಕಾರ್ಯ ನಡೆಸುತ್ತಾರೆ. ಏಣಿ ಹಾಗೂ ಹಗ್ಗಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ಜನರು ಸಿಕ್ಕಿಹಾಕಿಕೊಂಡಾಗ ಬಳಸಲಾಗುತ್ತದೆ. ಪ್ರಮುಖವಾಗಿ ಹಗ್ಗ ಕಟ್ಟಿ ಕೆಳಗೆ ಇಳಿಸುವಾಗ ವ್ಯಕ್ತಿ/ಮಹಿಳೆ ಇಳಿಸುವ ಸ್ಥಳದಲ್ಲಿ ಹಾಸಿಗೆ ಹಾಕಲಾಗಿರುತ್ತದೆ.
ಅಪ್ಪಿತಪ್ಪಿ ಅವರು ಕೆಳಗೆ ಬಿದ್ದಲ್ಲಿ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಉದ್ದೇಶ ಇದರದ್ದು. ಎಎಲ್‌ಪಿ ಎಂದರೆ ಅದು ತೊಟ್ಟಿಲು ರೀತಿ ಇರುತ್ತದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ  ಅದರಲ್ಲಿ ನಿಂತ ತಕ್ಷಣ ಯಂತ್ರದದ ಸಹಾಯದಿಂದ ತೊಟ್ಟಲ ಸಮೇತ ಅವರನ್ನು ಮೇಲೆ ಕಳಿಸಲಾಗುತ್ತದೆ.
ಮೇಲೆ ಹೋಗುವ ಸಿಬ್ಬಂದಿ ಕಿಟಕಿ ಅಥವಾ ಬಾಗಿಲಿನಿಂದ ಕಟ್ಟದೊಳಗೆ ಹೋಗಿ ಅಲ್ಲಿ ಸಿಲುಕಿರುವವರನ್ನು ಎಎಲ್‌ಪಿಗೆ ಇಳಿಸುತ್ತಾರೆ. ಒಮ್ಮೆಲೆ ಐದಾರು ಜನರನ್ನು ಅಥವಾ  ಅದ್ಕಕಿಂತ ಹೆಚ್ಚು ಜನರನ್ನು ರಕ್ಷಿಸಿ ಕರೆತರುವಾಗ ಇವುಗಳನ್ನು ಬಳಸಲಾಗುತ್ತದೆ. <

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement