ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹರ ಕೊಲ್ಲಲ್ ಗುರು ಕಾಯ್ವನ್

Lingaraj Badiger
Updated On : 25 Jun 2013, 5:00 am

ನರೇಂದ್ರ ನಾನಾ ಬಗೆಯ ಕಷ್ಟಗಳಿಗೆ, ಪ್ರಲೋಭನೆಗಳಿಗೆ ಒಳಗಾಗದೆ ಭಗವಂತನಲ್ಲಿ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಒಂದು ದಿನ ಎಂದಿನಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ, ಅವನ ತಾಯಿ 'ಛೀ ದಡ್ಡ! ಸಾಕು ಸುಮ್ಮನಿರೋ. ನೀನು ನಿನ್ನ ಬಾಲ್ಯದಿಂದಲೂ ಆ ದೇವರಿಗಾಗಿ ಗಂಟಲು ಕಿತ್ತುಕೊಂಡೆಯಲ್ಲ, ಕೊನೆಗೆ ಅವನು ನಿನಗೆ ಏನು ಮಾಡಿದ?' ಎಂದುಬಿಟ್ಟಳು.
ಬಾಲ್ಯದಲ್ಲಿ ಭಗವಂತನ ಕುರಿತಾಗಿ ಬೋಧಿಸಿದ ತಾಯಿಯೇ ಹೀಗೆಂದಾಗ ನರೇಂದ್ರ ತತ್ತರಿಸಿಹೋದ. 'ನಿಜಕ್ಕೂ ದೇವರು ಇರುವುದು ನಿಜವೇ?' ಎಂದು ಸಂಶಯಕ್ಕೀಡಾದ. ದೇವರ ಅಸ್ತಿತ್ವದ ಬಗ್ಗೆ ಸಂಶಯಗಳು ಆತನಲ್ಲಿ ಹುಟ್ಟಿಕೊಂಡವು. 'ದೇವರು ಇರುವುದು ಬರೀ ಸುಳ್ಳು. ಅದೆಲ್ಲ ಕೇವಲ ಕಂತೆಪುರಾಣ. ಅವನನ್ನು ಪ್ರಾರ್ಥಿಸುವುದು ನಿರರ್ಥಕ' ಎಂದುಬಿಟ್ಟ. ನರೇಂದ್ರ ನಾಸ್ತಿಕನಾಗಿಬಿಟ್ಟ ಎಂಬ ಸುದ್ದಿ ಎಲ್ಲ ಕಡೆ ಹಬ್ಬಿಬಿಟ್ಟಿತು. ಕೊನೆಗೆ ಈ ಸುದ್ದಿ ಶಿಷ್ಯನೊಬ್ಬನ ಮೂಲಕ ರಾಮಕೃಷ್ಣರ ಕಿವಿಗೂ ಬಿತ್ತು. ತಕ್ಷಣ ರಾಮಕೃಷ್ಣರು 'ಮೂರ್ಖ, ಹಾಗೆಲ್ಲ ಮಾತನಾಡಬೇಡ! ನರೇಂದ್ರ ಎಂದಿಗೂ ದಾರಿತಪ್ಪಿ ನಡೆಯಲಾರ. ಇನ್ನೊಂದು ಸಲ ಏನಾದರೂ ಅವನ ಬಗ್ಗೆ ಹಾಗೆಲ್ಲ ಮಾತನಾಡಿದರೆ ನಾನು ನಿನ್ನ ಮುಖ ನೋಡುವುದಿಲ್ಲ' ಎಂದು ರೇಗಿಬಿಟ್ಟರು.
ಈ ವಿಷಯ ನರೇಂದ್ರನಿಗೆ ತಿಳಿದಾಗ ಅವನಿಗಾದ ಆಶ್ಚರ್ಯ, ಆನಂದ ಅಷ್ಟಿಷ್ಟಲ್ಲ. ತನ್ನ ಮೇಲೆ ಅವರಿಗಿರುವ ವಿಶ್ವಾಸ, ಪ್ರೇಮಗಳನ್ನು ಮನಗಂಡು ಅವನ ಕಣ್ಣಲ್ಲಿ ನೀರು ತುಂಬಿತು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement