ಗಾತ್ರದಿಂದ ಪರಿಣಾಮ ಇಲ್ಲವಾ?
22 ವರ್ಷ. ಗೆಳೆಯರಿಗೆ ಹೋಲಿಸಿಕೊಂಡರೆ ನನ್ನದು ತೀರಾ ಚಿಕ್ಕದು. ಆದರೆ ಕಾಮೋದ್ರೇಕವಾಗುತ್ತದೆ. ರಾತ್ರಿ ಕನಸು ಬಿದ್ದಾಗ ಸ್ಖಲನವಾಗುತ್ತದೆ. ಗೆಳೆಯರ ವ್ಯಂಗ್ಯದಿಂದ ಮನಸ್ಸಿಗೆ ನೋವಾಗುತ್ತದೆ. ನಾನು ಮದುವೆ ಮಾಡಿಕೊಂಡರೆ ಮಕ್ಕಳಾಗಲು ಸಾಧ್ಯವಿಲ್ಲವಾ?
- ಶ್ರೀನಿವಾಸ, ವಾಡಿ
ಈ ಬಗ್ಗೆ ಎಷ್ಟೇ ತಿಳಿವಳಿಕೆ ನೀಡಿದರೂ ಮತ್ತೆ ಮತ್ತೆ ಇಂಥದೇ ಪ್ರಶ್ನೆಗಳು ಎದುರಾಗುತ್ತಿವೆ. ಗಾತ್ರಕ್ಕೂ, ಲೈಂಗಿಕ ತೃಪ್ತಿಗೂ, ಸಂತಾನೋತ್ಪತ್ತಿಗೂ ಯಾವುದೇ ಸಂಬಂಧ ಇಲ್ಲ. ವ್ಯಕ್ತಿಗಳಲ್ಲಿ ಎಲ್ಲರೂ ಒಂದೇ ಬಣ್ಣ, ಗಾತ್ರ, ರೂಪದಲ್ಲಿರುತ್ತಾರಾ? ಇಲ್ಲ ತಾನೆ? ಹಾಗೆಯೇ ಇದು ಕೂಡ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದು ಸಹಜ. ಹೀಗಾಗಿ ಗೆಳೆಯರೊಂದಿಗೆ ಹೋಲಿಸಿಕೊಂಡು ಸುಮ್ಮನೆ ವ್ಯಥೆ ಪಡುವಿರೇಕೆ? ಸ್ವಪ್ನಸ್ಖಲನ ಆಗುತ್ತಿದೆ ಎಂದ ಮೇಲೆ ನಿಮ್ಮಲ್ಲಿ ಎಲ್ಲವೂ ಸಹಜವಾಗಿದೆ ಎಂದೇ ಅರ್ಥ.
-ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...